Select Page

Advertisement

ಜಾತಿ ನಿಂದನೆ ; ಬಂಧನದ ಭೀತಿಯಿಂದ ಓಡಿ ಹೊಗ್ತಿದ್ರಾ ಬಿಜೆಪಿ ಶಾಸಕ ಮುನಿರತ್ನ

ಜಾತಿ ನಿಂದನೆ ; ಬಂಧನದ ಭೀತಿಯಿಂದ ಓಡಿ ಹೊಗ್ತಿದ್ರಾ ಬಿಜೆಪಿ ಶಾಸಕ ಮುನಿರತ್ನ

ಬೆಂಗಳೂರು : ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪದ ಮೇಲೆ ಬೆಂಗಳೂರು ಆರ್,ಆರ್ ನಗರದ ಶಾಸಕ ಮುನಿರತ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗುತ್ತಿಗೆದಾರ ಚಲುವರಾಜು ಎಂಬುವವರಿಗೆ ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಎರಡು ಎಫ್ಐಆರ್ ದಾಖಲಾಗಿದ್ದವು. ಈ ಬೆನ್ನಲ್ಲೇ ಶಾಸಕ ಬೇರೆಡೆಗೆ ಓಡಿ ಹೋಗುತ್ತಿದ್ದರಾ ಎಂಬ ಅನುಮಾನ ಹುಟ್ಟುಹಾಕಿದೆ.

ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಶಾಸಕ ಮುನಿರತ್ನ ಆಂದ್ರಪ್ರದೇಶಕ್ಕೆ ಓಡಿ ಹೋಗುವ ಯತ್ನ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಬೇಸಿಕ್ ಮೋಬೈಲ್ ಫೋನ್ ಬಳಸಿಲುವುದರ ಜೊತೆಗೆ ಎಸ್ಕೆಪ್ ಆಗುತ್ತಿದ್ದ ಮುನಿರತ್ನ ಕೋಲಾರದಲ್ಲಿ ಬಂಧನವಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಳಿ ಬಳಿ ಮುನಿರತ್ನ ಪೊಲೀಸರ ಕೈಗೆ ಸಿಲುಕಿಬಿದ್ದಿದ್ದಾರೆ. ಕೋಲಾರದ ಮೂಲಕ ಆಂದ್ರಪ್ರದೇಶಕ್ಕೆ ಓಡಿ ಹೋಗುತ್ತಿದ್ದರಾ ಎಂಬ ಅನುಮಾನ ಮೂಡಿತ್ತು.

Advertisement

Leave a reply

Your email address will not be published. Required fields are marked *

error: Content is protected !!