Select Page

Advertisement

ಆತ್ಮಹತ್ಯೆಗೆ ಶರಣಾದ 25 ವರ್ಷದ ಮಹಿಳಾ ಪೈಲಟ್..!

ಆತ್ಮಹತ್ಯೆಗೆ ಶರಣಾದ 25 ವರ್ಷದ ಮಹಿಳಾ ಪೈಲಟ್..!

ಮುಂಬೈ : 25 ವರ್ಷದ ಏರ್ ಇಂಡಿಯಾ ಪೈಲಟ್ ಮುಂಬೈ ನಗರದ ತನ್ನ ಪ್ಲಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಪೈಲಟ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ಮುಂಬೈ ನ ಅಂಧೇರಿಯಲ್ಲಿರುವ ಪ್ಲಾಟ್ ನಲ್ಲಿ ಸೃಷ್ಟಿ ತುಲಿ ಎಂಬ ಮಹಿಳಾ ಪೈಲಟ್ ಶವ ಹೊರತಗೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಆದಿತ್ಯ ಪಂಡಿತ್ ( 27 ) ಬಂಧಿಸಲಾಗಿದೆ.

ಈ ಕುರಿತು ಮೃತ ಸೃಷ್ಟಿ ಅವರ ಚಿಕ್ಕಪ್ಪ ದೂರು ದಾಖಲಿಸಿದ್ದು. ಆದಿತ್ಯ ಆಗಾಗ್ಗೆ ಸೃಷ್ಟಿಗೆ ಪೀಡಿಸುತ್ತಿದ್ದ. ಆಕೆಯ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ. ಜಗಳ ಮಡುತ್ತಿದ್ದ ಎಂದು ಆರೋಪಿಸಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!