ಭಾರತ ಸೇನೆ ದಾಳಿ : ಉಗ್ರ ಮಸೂದ್ ಅಜರ್ ಇಡೀ ಕುಟುಂಬ ಸರ್ವನಾಶ
ನವದೆಹಲಿ : ಪಹಲ್ಗಾಮ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ದಾಳಿಗೆ ಜೈಶ್ – ಎ – ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಸಂಪೂರ್ಣ ಸರ್ವನಾಶವಾಗಿದೆ.
ಪಾಕ್ ನೆಲದ 9 ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು ಸುಮಾರು 100 ಕ್ಕೂ ಅಧಿಕ ಉಗ್ರರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೈಶ್ – ಎ – ಮೊಹಮ್ಮದ್ ಉಗ್ರಗಾಮಿ ಸಂಘಟನೆ ಮೂಲಕ ಜಗತ್ತಿನಾದ್ಯಂತ ಜನಸಾಮಾನ್ಯರನ್ನು ಕೊಂದಿದ್ದ ಮಸೂದ್ ಅಜರ್ ಕುಟುಂಬವನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಒಂಬತ್ತು ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಈ ದಾಳಿಯ ತೀವ್ರತೆಗೆ ಬೆಚ್ಚಿ ಬಿದ್ದಿರುವ ಪಾಕಿಸ್ತಾನಕ್ಕೆ ದಾರಿ ಕಾಣದಂತಾಗಿದೆ.

