ಕೈ ಹಿಡಿದು ನಡೆಸುವರು ಯಾರಪ್ಪ…? ಕಾರ್ಖಾನೆ ಸ್ಪೋಟದಲ್ಲಿ ಪ್ರಾಣ ಬಿಟ್ಟ ಮಂಜುನಾಥಗೆ ಗಂಡು ಮಗು..!

ಅಥಣಿ : ಬೈಲಹೊಂಗಲ ತಾಲೂಕಿನ ಮುರಕುಂಬಿ ಗ್ರಾಮದ ಇನಾಮ್ದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಕಾರ್ಮಿಕರ ಸಾವು ನಿಜಕ್ಕೂ ಘೋರ ದುರಂತದ ಚಿತ್ರಣ ಕುಟುಂಬದ ಕರಾಳ ದಿನಕ್ಕೆ ಸಾಕ್ಷಿಯಾಗಿದೆ.
ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ ಕೇಸ್‌ನಲ್ಲಿ 8 ಜನ ಕಾರ್ಮಿಕರ ಪ್ರಾಣ ಪಕ್ಷಿ ಹಾರಿಹೋಗಿ ಕುಟುಂಬಕ್ಕೆ ಆಧಾರವಾಗಿದ್ದ ಯುವಕರು ಸೇರಿದೆ ಒಟ್ಟು 8 ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದುಹೋಗಿದೆ. ಅಥಣಿಯ ಮಂಜುನಾಥ್ ಗೋಪಾಲ್ ತೇರದಾಳ್ (30) ಸಾವು ನಿಜಕ್ಕೂ ತುಂಬು ಗರ್ಭಿಣಿಯಾಗಿದ್ದ ಮಡದಿ ಶೃತಿ ಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ.
ಮಡದಿಗೆ ಹೊಟ್ಟೆ ನೋವು ಕೌಣಿಸಿಕೊಂಡ ಹಿನ್ನಲೆ ಅಥಣಿಯ ವಾತ್ಸಲ್ಯ ಆಸ್ಪತ್ರೆಗೆ ದಾಖಸಲಾಗಿ ಬೆಳಿಗ್ಗೆ 12.30 ರ ಮುಂಜಾವಿನ ಸುಮಾರಿಗೆ ಗಂಡು ಮಗುವಿಗೆ ಜನ್ಮನೀಡಿದ್ದಾಳೆ. ಇತ್ತ ಗಂಡನನ್ನು ಕಳೆದುಕೊಂಡು ದುಃಖ ಪಡಬೇಕೋ ಗಂಡು ಮಗು ಹುಟ್ಟಿತೆಂದು ಸಂತಸಪಡಬೇಕೊ ಎಂಬುದು ತೋಚದಂತಾದ ಶೃತಿಯ ಪರಿಸ್ಥಿತಿ ನೋಡಿ ಎಂಥವರ ಕಣ್ಣುಗಳು ಕೂಡ ಒದ್ದೆಯಾಗುವಂತೆ ಮಾಡಿದೆ. ಇನ್ನು ಜೋಡಿ ಬಂಡಿಯನ್ನು ಸಾಗಿಸಬೇಕಿದ್ದ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದ್ದು ಮಾತ್ರ ಸುಳ್ಳಲ್ಲ.

