ತಂದೆಯ ಕೈಯಿಂದ ಅಧಿಕಾರ ಸ್ವೀಕರಿಸಿದ ಮಗಳು : ಮಂಡ್ಯದಲ್ಲಿ ನಡೆಯಿತು ಭಾವನಾತ್ಮಕ ಸನ್ನಿವೇಶ..!
ಮಂಡ್ಯ : ಹೆತ್ತ ತಂದೆಯ ಕೈಯಿಂದ ಅಧಿಕಾರ ಸ್ವೀಕರಿಸುವ ಅದ್ಬುತ ಸಂದರ್ಭ ತುಂಬಾ ಅದೃಷ್ಟವಂತರಿಗೆ ಬರುತ್ತದೆ. ಇದರಲ್ಲಿ ಮಂಡ್ಯ ನಗರದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಭಾವನಾತ್ಮಕ ಸನ್ನಿವೇಶ ಘಟಿಸಿದ್ದು ಎಸ್ ಐ ಆಗಿದ್ದ ಬಿ.ಎಸ್ ವೆಂಕಟೇಶ ಅವರು ಎಸ್ಪಿ ಕಚೇರಿಗೆ ವರ್ಗಾವಣೆ ಆಗಿದ್ದು ಅವರ ಸ್ಥಾನಕ್ಕೆ ಮಗಳು ಅಧಿಕಾರ ಸ್ವೀಕರಿಸಿದ್ದಾರೆ.
ಹೌದು ಈ ಒಂದು ಅದ್ಬುತ ಘಟನೆಗೆ ಸಾಕಗಷಿಯಾಗಿದ್ದು ಮಂಡ್ಯ ಜಿಲ್ಲೆಯ ಸೆಂಟ್ರಲ್ ಪೊಲೀಸ್ ಠಾಣೆ. ಜೂನ್ 20 ರ ಮಂಗಳವಾರ ಇದೇ ಠಾಣೆಯಲ್ಲಿ ಎಸ್ ಐ ಆಗಿದ್ದ ಬಿ.ಎಸ್ ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆ ಆಗಿದ್ದಾರೆ. ಸಧ್ಯ ಅವರ ಸ್ಥಾನಕ್ಕೆ ನೂತನ ಎಸ್ ಐ ಹಾಗೂ ಅರವ ಮಗಳಾದ ಬಿ.ವಿ ವರ್ಷಾ ತಂದೆಯ ಕೈಯಿಂದ ಅಧಿಕಾರ ಪಡೆಯುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದ ಬಿ.ವಿ ವರ್ಷಾ 2022 ರ ಬ್ಯಾಚ್ ನಲ್ಲಿ ಪಿಎಸ್ಐ ಆಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ಕಲಬುರಗಿಯಲ್ಲಿ ತರಬೇತಿ ಪಡೆದಿದ್ದ ಇವರು ಪ್ರಬೇಷನರಿ ಟ್ರೈನಿಂಗ್ ಪಡೆದು ತಮ್ಮ ಮೊದಲ ಪೋಸ್ಟಿಂಗ ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಪ್ರಾರಂಭಿಸಿದ್ದಾರೆ. ಸಧ್ಯ ಹೆತ್ತ ತಂದೆಯಿಂದಲೇ ಚಾರ್ಚ ಪಡೆದು ವೃತಿ ಜೀವನ ಆರಂಭಿಸಿದ್ದಾರೆ.
ಸೇನಾ ಅಧಿಕಾರಿ ತಂದೆಯೇ ಮಗಳಿಗೆ ಸ್ಪೂರ್ತಿ : ಮಹಿಳಾ ಎಸ್ಐ ಬಿ.ವಿ ವರ್ಷಾ ಅವರಿಗೆ ಹೆತ್ತ ತಂದೆಯೇ ಸ್ಪೂರ್ತಿ. ದಕ್ಷ ಮಿಲಿಟರಿ ಅಧಿಕಾರಿಯಾಗಿದ್ದ ಅವರ ಜೀವನ ಕ್ರಮವೇ ಇವರಿಗೆ ಆಸರೆ. ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರಾದ ವೆಂಕಟೇಶ ಅವರು 16 ವರ್ಷಗಳ ಕಾಲ ಮಿಲಿಟರಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಹೆಮ್ಮೆಯ ಸೈನಿಕ ಇವರು. ತಂದೆಯೇ ನನಗೆ ನಿಜವಾದ ಸ್ಪೂರ್ತಿ. ಅವರ ಬದುಕು ನನಗೆ ಹೆಚ್ಚಿನ ಬಲ ಕೊಟ್ಟಿತು. ಅವದರಂತೆ ದಕ್ಷ ಆಡಳಿತ ನೀಡುವ ಜವಾಬ್ದಾರಿ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಮಗಳು ವರ್ಷ.


