Select Page

ಠಾಣೆಯಲ್ಲೇ ಪೊಲೀಸರ ಕಪಾಳಕ್ಕೆ ಹೊಡೆದ ಐನಾತಿ ಯುವಕ

ಠಾಣೆಯಲ್ಲೇ ಪೊಲೀಸರ ಕಪಾಳಕ್ಕೆ ಹೊಡೆದ ಐನಾತಿ ಯುವಕ

ಮಂಡ್ಯ : ತನಗೆ ಕಪಾಳಕ್ಕೆ ಹೊಡೆದ ಪೊಲೀಸ್ ಪೇದೆಗೆ ಯುವಕನೊಬ್ಬ ಪೊಲೀಸ್ ಠಾಣೆಯಲ್ಲೇ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದಿದೆ.

ಪಟ್ಟಣದ ಹಿರೋಡೆ ಬೀದಿಯ ಪಿ.ಎಸ್.ಜಗದೀಶ್ ಅವರ ಪುತ್ರ ಸಾಗರ್ (30) ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದವ ಎನ್ನಲಾಗಿದೆ.

ಪೊಲೀಸ್ ಪೇದೆಅಭಿಷೇಕ್ ಮೇಲೆ ಹಲ್ಲೆ ನಡೆಸಿರುವ ಸಾಗರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಮೀನಿನ ವಿಚಾರವಾಗಿ ನಡೆದಿದ್ದ ಜಗಳ ಸಂಬಂಧ ಲಕ್ಷ್ಮೀನಾರಾಯಣ ಎಂಬು ವವರು ಸಾಗರ್ ವಿರುದ್ದ ದೂರು ದಾಖಲಿಸಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಠಾಣೆಯಲ್ಲಿ ಮತ್ತೆ ಸಾಗರ್ ಲಕ್ಷ್ಮೀ ನಾರಾಯಣ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಈ ವೇಳೆ ಮಧ್ಯಪ್ರವೇಶಿಸಿದ ಪೇದೆ ಅಭಿಷೇಕ್ ಸಾಗರ ಅವರನ್ನು ತಳ್ಳಿ ಸಮಾದಾನ ಪಡಿಸಲು ಯತ್ನಿಸಿದ್ದಾನೆ.
ಆದರೆ ಮೊದಲೇ ಕೋಪ ಗೊಂಡಿದ್ದ ಸಾಗರ್ ಪೊಲೀಸ್ ಅಭಿಷೇಕ್ ಅವರ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ.

ಕರ್ತವ್ಯದಲ್ಲೇ ಇದ್ದ ಪೊಲೀಸರುಗಳಾದ ಲಕ್ಷ್ಮೀ ಮತ್ತು ಆನಂದ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಸಾಗರ್ ನನ್ನ ವಿಚಾರಕ್ಕೆ ಬರಬೇಡಿ ಎಂದು ಲಕ್ಷ್ಮೀ ಮತ್ತು ಆನಂದ ಅವರಿಗೂ ಧಮ್ಕಿಹಾಕಿದ್ದಾನಲ್ಲದೇ ಕುಡಿಯುವ ನೀರಿನ ಕ್ಯಾನ್‌ ಎತ್ತಿ ಬಿಸಾಡಿದಾಂಧಲೆ ಮಾಡಿದ್ದಾನೆ.

ಪೇದೆ ಅಭಿಷೇಕ್ ನೀಡಿದ ದೂರಿನ ಮೇಲೆ ಪೊಲೀಸರು ಆರೋಪಿ ಸಾಗರ್ ನನ್ನು ಬಂಧಿಸಿ ನ್ಹಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!