Select Page

Advertisement

ನಾ ಡ್ರೈವರ ಖ್ಯಾತಿಯ ಮಾಳು‌ ನಿಪನಾಳನ ರೌಡಿಸಂ ; ಮಹಿಳೆ ಮೇಲೆ‌ ಹಲ್ಲೆ ನಡೆಸಿದ ಸಿಂಗರ್

ನಾ ಡ್ರೈವರ ಖ್ಯಾತಿಯ ಮಾಳು‌ ನಿಪನಾಳನ ರೌಡಿಸಂ ; ಮಹಿಳೆ ಮೇಲೆ‌ ಹಲ್ಲೆ ನಡೆಸಿದ ಸಿಂಗರ್

ಬೆಳಗಾವಿ : ಸೋಶಿಯಲ್ ಮೀಡಿಯಾದಲ್ಲಿ ಸ್ವಲ್ಪ ಹೆಸರು ಮಾಡಿದರೆ ಸಾಕು, ಸೊಕ್ಕು ನೆತ್ತಿಗೇರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ನಾ ಡ್ರೈವರ ಹಾಡಿನ ಮೂಲಕ ಹೆಸರು ಮಾಡಿದ್ದ ಮಾಳು ನಿಪನಾಳ ವಿರುದ್ಧ ಮಹಿಳೆ ಹಾಗೂ ಓರ್ವ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಯುವಕ ಹಾಗೂ ಆತನ ಸಹೋದರಿ ಬೈಕ್ ಮೇಲೆ ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಗಾಯಕ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಎದುರಿಗಿದ್ದ ಯುವಕನ ಬೈಕ್ ಮೈಮೇಲೆ ಹಾಕುವಂತೆ ಕಾರು ಓಡಿಸಿಸುತ್ತಿದ್ದರು.

ಈ ಸಂದರ್ಭದಲ್ಲಿ ಬೈಕ್ ಮೇಲಿದ್ದ ಮಹಿಳೆ ನೋಡಿಕೊಂಡು ಸಂಚರಿಸಿ ಎಂದು ಹೇಳುತ್ತಿದ್ದಂತೆ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಇದರಿಂದ ವ್ಯಕ್ತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಯುವಕ ಹಾಗೂ ಆತನ ಸಹೋದರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾವಕಾಶವಾಗಿ ಕಾರು ಓಡಿಸಿ ಎಂದು ಹೇಳಿದ್ದೇ ತಡ, ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೂ ಮೊದಲು ಗಾಯಕ ಮಾಳು ನಿಪನಾಳ ಮೇಲೆ ಮೂರು ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!