Select Page

Advertisement

ಮಲಪ್ರಭಾ ಜಲಾಶಯಕ್ಕೆ ಬಿಗಿ ಭದ್ರತೆ : ಪ್ರವಾಸಿಗರಿಗೆ ನಿರ್ಭಂಧ

ಮಲಪ್ರಭಾ ಜಲಾಶಯಕ್ಕೆ ಬಿಗಿ ಭದ್ರತೆ : ಪ್ರವಾಸಿಗರಿಗೆ ನಿರ್ಭಂಧ

ಸವದತ್ತಿ : ಆಪರೇಷನ್ ಸಿಂಧೂರ್ ಬಳಿಕ ಬೆದರಿದ ಪಾಕಿಸ್ತಾನ ಪ್ರತೀಕಾರಕ್ಕೆ ಹೊಂಚು ಹಾಕಿದ್ದು ರಾಷ್ಟ್ರೀಯ ಪ್ರಮುಖ ಅಣೆಕಟ್ಟುಗಳಿಗೆ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿದೆ. 
 
ತಾಲೂಕಿನ ಮುನವಳ್ಳಿ ಹತ್ತಿರದ ಮಲಪ್ರಭಾ ಯೋಜನಾ ವಲಯದಡಿಯಲ್ಲಿ ಬರುವ ಮಲಪ್ರಭಾ ಅಣೆಕಟ್ಟು ಇದರಲ್ಲಿ ಒಂದಾಗಿದ್ದು ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ತಕ್ಷಣವೇ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಮಲಪ್ರಭಾ ನವಿಲುತೀರ್ಥ ಡ್ಯಾಮ್ ನಲ್ಲಿ ಅಧಿಕಾರಿಗಳು ಸಿಬ್ಬಂದಿ ಹೊರತುಪಡಿಸಿ ಪ್ರವಾಸಿಗರಿಗೆ ಪ್ರವೇಶ ನಿರ್ಭಂಧಿಸಲಾಗಿದೆ. ಸುತ್ತಮುತ್ತ ಪೊಲೀಸ್ ಭದ್ರತೆ ನಿಯೋಜಿಸಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. 

ಮಲಪ್ರಭಾ ಜಲಾಶಯದ ಭದ್ರತೆಗೆ ಒಂದು ಡಿ ಆರ್ ವ್ಯಾನ್ ಸೇರಿ ಸಿವಿಲ್ ಹಾಗೂ ರಿಜರ್ವ ಪೊಲೀಸ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ಚಲನವಲನಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಮಲಪ್ರಭಾ ಜಲಾಶಯಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧವಿಧಿಸಲಾಗಿದೆ.‌ 

ಪಿ ಐ ಧರ್ಮಾಕರ ಧರ್ಮಟ್ಟಿ

Advertisement

Leave a reply

Your email address will not be published. Required fields are marked *

error: Content is protected !!