ಮಹಾತ್ಮ ಗಾಂಧಿ ಪ್ರತಿಮೆ ಕಳ್ಳತನ
ಆಸ್ಟ್ರೇಲಿಯಾ : ಇಲ್ಲಿನ ಮೆಲ್ಬರ್ನ್‌ನ (Melbourne) ರೌವಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಮಹಾತ್ಮ ಗಾಂಧೀಜಿಯ (Mahatma Gandhi) ಕಂಚಿನ ಪ್ರತಿಮೆಯನ್ನು (Statue) ಕಳ್ಳತನ (Stolen) ಮಾಡಲಾಗಿದೆ. ರೌವಿಲ್ಲೆಯಲ್ಲಿ ಅನಿವಾಸಿ ಭಾರತೀಯರ ಚಾರಿಟಿ ಆವರಣದಲ್ಲಿದ್ದ ಮಹಾತ್ಮ ಗಾಂಧೀಜಿ ಪ್ರತಿಮೆ ಏಕಾಏಕಿ ಕಾಣೆಯಾಗಿದೆ.
2021ರ ನವೆಂಬರ್ 12ರಂದು ಈ ಪ್ರತಿಮೆಯನ್ನು ಅನಿವಾಸಿ ಭಾರತೀಯರ ಚಾರಿಟಿ ಆವರಣದಲ್ಲಿದ್ದ ಪ್ರತಿಷ್ಠಾಪಿಸಲಾಗಿತ್ತು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಪ್ರತಿಮೆಯನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಬರಲ್ ರಿಲೇಶನ್ಸ್ ಉಡುಗೊರೆಯಾಗಿ ನೀಡಿತ್ತು.
ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಜನವರಿ 12ರಂದು ಈ ಕಳ್ಳತನ ನಡೆದಿದೆ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಮೂವರು ಆರೋಪಿಗಳು ಗಾಂಧಿ ಪ್ರತಿಮೆಯನ್ನು ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


