ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ; ಆದಿವಾಸಿ ಯುವಕನ ಪಾದ ತೊಳೆದ ಮುಖ್ಯಮಂತ್ರಿ, ಮನೆ ನೆಲಸಮ
ಮಧ್ಯಪ್ರದೇಶ : ಬುಡಕ್ಕಟ್ಟು ಕಾರ್ಮಿಕರೊಬ್ಬರ ಮೇಲೆ ಬಿಜೆಪಿ ಯುವ ಮುಖಂಡ ಪ್ರವೇಶ್ ಶುಕ್ಲಾ ಎಂಬಾತ ಮುಖದಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿತ್ತು.
ಈ ಘಟನೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ದಶಮತ ರಾವತ್ ಎಂಬಾತನ ಪಾದ ತೊಳೆಯುವ ಮೂಲಕ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಘಟನೆಯನ್ನು ವಿರೋಧಿಸಿದ್ದಾರೆ.
ಮುಖ್ಯಮಂತ್ರಿಗಳ ಸ್ವಗೃಹದಲ್ಲಿ ದಶಮತ್ ಅವರನ್ನು ಕರೆಯಿಸಿ ಅವರ ಪಾದ ತೊಳೆದಿದ್ದಾರೆ. ಜೊತೆಗೆ ಅವರಿಗೆ ಸನ್ಮಾನ ಮಾಡಿ ಘಟನೆ ಕುರಿತು ಕ್ಷಮೆ ಕೇಳಿದ್ದಾರೆ.
ಆರೋಪಿ ಮನೆ ಜೆಸಿಬಿ ಇಂದ ತೆರವು : ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ಕಾರ್ಯಕರ್ತ ಪ್ರವೇಶ್ ಶುಕ್ಲಾ ಎಂಬಾತನ ಮನೆ ಮೇಲೆ ಜೆಸಿಬಿ ಹತ್ತಿಸುವ ಮೂಲಕ ಆತನ ಮನೆಯನ್ನು ನೆಲಸಮ ಮಾಡಲಾಗಿದೆ. ಮಧ್ಯಪ್ರದೇಶ ಸಿಎಂ ನಡೆಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.
ಘಟನೆ ವಿವರ : ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಕಾರ್ಮಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ಸಧ್ಯ ಎಲ್ಲೆಡೆ ವೈರಲ್ ಆಗಿದೆ. ಮಧ್ಯಪ್ರದೇಶದ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಎಂಬಾತ ಈ ಕೃತ್ಯ ಎಸಗಿದ್ದು ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಸಧ್ಯ ಈ ಘಟನೆ ಕುರಿತಾಗಿ ಆರೋಪಿ ಪ್ರವೇಶ್ ಶುಕ್ಲಾ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

