Select Page

ಲಂಚಕ್ಕೆ ಬೇಡಿಕೆ ; ರಾಯಬಾಗ ತಹಶಿಲ್ದಾರ ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ

ಲಂಚಕ್ಕೆ ಬೇಡಿಕೆ ; ರಾಯಬಾಗ ತಹಶಿಲ್ದಾರ ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ



ಬೆಳಗಾವಿ : ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ರಾಯಬಾಗ ತಾಲೂಕು ತಹಶಿಲ್ದಾರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ‌‌ ನಡೆಸಿದ್ದಾರೆ.

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ರೈತ ನಾದ ಶ್ರೀ ಶಿವಾನಂದ ದುಂಡಗಿ ರವರ ಅಜ್ಜನಿಗೆ ಸನ್ 1974 ರಲ್ಲಿ ಭೂ ನ್ಯಾಯಮಂಡಳಿ ಆದೇಶ ದಂತೆ ಮಂಜೂರಾದ ಜಮೀನನ್ನು ಕನಿಷ್ಠ 15 ವರ್ಷಗಳ ವರೆಗೆ ಪರಬಾರೆ ಮಾಡಬಾರದು ಅಂತಾ ಪಹಣಿ ಯಲ್ಲಿದ್ದ ನಿರ್ಬಂಧ ವನ್ನು ತೆಗೆದು ಆದೇಶ ಮಾಡಿ ಕೊಡುವಂತೆ ರಾಯಬಾಗ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು.

ಸದರಿ ಅರ್ಜಿಯ ಹಿನ್ನಲೆಯಲ್ಲಿ ಸಂಬಂಧಪಟ್ಟ ಅರ್ಜಿಯ ಮೇಲೆ ಕ್ರಮ ಜರುಗಿಸಿ ತಹಸೀಲ್ದಾರ್ ರಾಯಬಾಗ ರವರಿಂದ್ ಆದೇಶ ಮಾಡಿಸಿ ಕೊಡಲು ಕೇಸವರ್ಕರ್ ಆದ್ ಚಂದ್ರಮಪ್ಪ ಮೋರಟಗಿ (ದ್ವಿ ದ ಸ ) ರವರು ರೂ 80000/- ಲಂಚ ಕ್ಕೆ ಬೇಡಿಕೆ ಇಟ್ಟಿದ್ದರು.

ಈ‌ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ‌ ನಡೆಸಿ ತನಿಖೆ ಮುಂದುವರಿಸಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!