ಲೋಕಾಯುಕ್ತ ದಾಳಿ ; ಮುಖ್ಯ ಇಂಜಿನಿಯರ್ ಮನೆಯಲ್ಲಿ ಸಿಕ್ತು ಕೋಟೆ ಬೆಲೆ ವಸ್ತು
ಬೆಳಗಾವಿ : ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಕೋಟ್ಯಾಂತರ ಬೆಲೆಯ ವಜ್ರ ಹಾಗೂ ಚಿನ್ನಾಭರಣ ಪತ್ತೆಯಾಗಿದೆ.
ಕೆಎನ್‌ಎನ್ಎಲ್ ಧಾರವಾಡ ವಿಭಾಗದ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ ವಸಂದ್ ಅವರ ಕಚೇರಿ ಹಾಗೂ ಬೆಳಗಾವಿಯ ರಾಮತೀರ್ಥನ ಗರದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಮುಖ್ಯ ಇಂಜಿನಿಯರ್ ಮನೆಯಲ್ಲಿ ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ಒಂದೂವರೆ ಲಕ್ಷ ನಗದು ಪತ್ತೆಯಾಗಿದೆ. ಧಾರವಾಡ ಲೋಕಾಯುಕ್ತ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರಿದಿದೆ.

