ಬೆಳಗಾವಿ : ಬಿಜೆಪಿ ಸಮಾವೇಶದಲ್ಲಿ ಇಷ್ಟು ಜನಾ ಸೇರಿದ್ದು ನೋಡಿದರೆ ಲಕ್ಷ್ಮೀ ಹೆಬ್ಬಾಳ್ಕರ್ ರಾತ್ರಿ ಒಂದು ಎಕ್ಸ್ಟ್ರಾ ಪೆಗ್ ಕುಡಿಬೇಕಾಗುತ್ತೆ ಎಂದು ಹೇಳುವ ಮೂಲಕ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ‌.

ಶನಿವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಂಜಯ ಪಾಟೀಲ್,  ಬೆಳಗಾವಿ ಗ್ರಾಮೀಣ‌ ಮತಕ್ಷೇತ್ರದಲ್ಲಿ ಮಹಿಳೆಯರುವುದು ನೋಡಿದರೆ  ಅವರಿಗೆ ನಿದ್ದೆ ಬರುವುದಿಲ್ಲ.

ರಮೇಶ ಜಾರಕಿಹೊಳಿ ಬಂದಿರುವುದು ನೋಡಿದರೆ ಕಷ್ಟವಾಗುತ್ತದೆ. ಲಕ್ಷ್ಮೀ ಅವರು ಇವತ್ತು‌ ನಿದ್ದೆ ಮಾತ್ರೆ ತೆಗೆದುಕೊಂಡು ಮಲಗಬೇಕು. ಇಲ್ಲದಿದ್ದರೆ ಒಂದು ಎಕ್ಸಟ್ರಾ ಪೆಗ್ ಹೊಡೆಯಬೇಕಾಗುತ್ತದೆ ಎಂದಿರುವುದು ಮಹಿಳೆಯರನ್ನು ಕೆರಳಿಸುವಂತೆ ಮಾಡಿದೆ.

ಬಿಜೆಪಿ ಮಹಿಳೆಯರಿಗೆ ಗೌರವ, ರಕ್ಷಣೆ ಕೊಡುವ ಪಕ್ಷ. ಬಿಜೆಪಿಯ ಮಾಜಿ ಶಾಸಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಹಗುರವಾಗಿ ಮಾತನಾಡಿರುವುದನ್ನು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಂಜಯ ಪಾಟೀಲ್ ಹೇಳಿಕೆಗೆ ತೀವ್ರವಾಗಿ ಖಂಡಿಸಿದ್ದಾರೆ.