Select Page

ಯುನಿಯನ್ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ : ಶಾಸಕ ಲಕ್ಷ್ಮಣ ಸವದಿ ಹೇಳಿದ್ದೇನು..? Video

ಯುನಿಯನ್ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ : ಶಾಸಕ ಲಕ್ಷ್ಮಣ ಸವದಿ ಹೇಳಿದ್ದೇನು..? Video




ಬೆಳಗಾವಿ : ಬಿಡಿಸಿಸಿ ಬ್ಯಾಂಕ್ ಲೇಬರ್ ಯೂನಿಯನ್ ಅಧ್ಯಕ್ಷನ ವಿರುದ್ಧ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಹಿನ್ನಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.

ಯುನಿಯನ್ ವಿಚಾರವಾಗಿ ನನ್ನ ಮನೆಗೆ ಅವರು ಬಂದಿದ್ದರು. ಈ ವೇಳೆ ನಾನು ಸಮಸ್ಯೆ ಕುರಿತು ಅಧ್ಯಕ್ಷರ ಗಮನಕ್ಕೆ ತರಬೇಕು ಎಂದು ಹೇಳಿದೆ. ಅಷ್ಟರಲ್ಲಿ ನಮ್ಮ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ ಎಂದರು.

ಈ ವೇಳೆ ನಮ್ಮ ಕಾರ್ಯಕರ್ತ ಶ್ರೀಕಾಂತ್ ಆಲಗೂರ ಎಂಬಾತನಿಗೆ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಜಾತಿ‌ ನಿಂದನೆ ಹಾಗೂ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು ಈ ಕಾರಣಕ್ಕೆ ಗಲಾಟೆ ಸಂಭವಿಸಿದೆ ಎಂದರು.

ಹೊಡೆದಾಟ ನಮ್ಮಲ್ಲಿ ಯಾವತ್ತೂ ನಡೆದಿಲ್ಲ. ನಮ್ಮ ಹೆಸರು ಕೆಡಿಸಲು ಈ ರೀತಿಯ ರಾಜಕೀಯ ಆರೋಪ ಮಾಡುತ್ತಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಬಯಲಾಗಲಿದೆ ಎಂದರು‌.

Advertisement

Leave a reply

Your email address will not be published. Required fields are marked *

error: Content is protected !!