ಡಿಸಿಸಿ ಬ್ಯಾಂಕ್ ಚುನಾವಣೆ ; 10 ಪ್ರತಿಶತ ಹೇಳಕ್ಕಾಗಲ್ಲವೆಂದ ಲಕ್ಷ್ಮಣ ಸವದಿ
ಬೆಂಗಳೂರು : ಎಂಎಲ್ಎ ಹಾಗೂ ಎಂಪಿ ಚುನಾವಣೆಗಿಂತಲೂ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಮಗೆ ಮುಖ್ಯ. ನಾಯಕರ ನಡುವಿನ ಮಾತುಕತೆ ಈಗಾಗಲೇ 90 ರಷ್ಟು ಆಗಿದ್ದು ಇನ್ನು ಹತ್ತು ಪ್ರತಿಶತ ಏನಾಗುತ್ತೆ ಹೇಳಲು ಆಗುವುದಿಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಡಿಸಿಸಿ ಬ್ಯಾಂಕ್ ತುಂಬಾ ಪ್ರತಿಷ್ಠಿತವಾಗಿದೆ. ಪಕ್ಷಾತೀತವಾಗಿ ಚುನಾವಣೆ ಎದುರಿಸುವ ಕುರಿತು ಮಾತುಕತೆ ಆಗಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕು ಎಂದರು.
ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಚುನಾವಣಾ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಆದರೆ ಸಚಿವ ಸತೀಶ್ ಜಾರಕಿಹೊಳಿ ಕೂಡಾ ಯರಗಟ್ಟಿಯಲ್ಲಿ ಶಾಸಕ ವಿಶ್ವಾಸ ವೈದ್ಯ ಪರ ಪ್ರಚಾರ ನಡೆಸಿದ್ದು ಈ ನಿಟ್ಟಿನಲ್ಲಿ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ.
ಒಂದುವೇಳೆ ಈ ಹಿಂದಿನಂತೆ ಈ ಸಲ ನಾಯಕರ ನಡುವಿನ ಒಗ್ಗಟ್ಟು ಮುರಿದರೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ರಣಕಣ ರಂಗೇರುವ ಸಾಧ್ಯತೆ ಇದೆ. ಅತ್ತ ಅಶೋಕ್ ಪಟ್ಟಣ, ಚನ್ನರಾಜ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ, ಅಂಜಲಿ ನಿಂಬಾಳ್ಕರ್ ಸೇರಿದಂತೆ ಅನೇಕರು ಸ್ಪರ್ಧೆ ನಡೆಸುವ ಗುಂಗಲ್ಲಿದ್ದಾರೆ.
ಹತ್ತು ಪ್ರತಿಶತ ಹೇಳಲು ಸಾಧ್ಯವಿಲ್ಲ ಎಂಬ ಲಕ್ಷ್ಮಣ ಸವದಿ ಅವರ ಮಾತು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಒಂದುವೇಳೆ ನಾಯಕರ ಮಧ್ಯೆ ಸ್ಫರ್ದೆ ಏರ್ಪಟ್ಟರೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುಕ್ಕಾಣಿ ಯಾರ ಪಾಲಾಗುತ್ತದೆ ಎಂದು ಹೇಳಲು ಅಸಾಧ್ಯ.

