Select Page

ರಾಮಭಕ್ತರು ಒಂದೇ ಪಕ್ಷದಲ್ಲಿಲ್ಲ ; ಬಿಜೆಪಿ ವಿರುದ್ಧ ಹರಿಹಾಯ್ದ ಸವದಿ

ರಾಮಭಕ್ತರು ಒಂದೇ ಪಕ್ಷದಲ್ಲಿಲ್ಲ ; ಬಿಜೆಪಿ ವಿರುದ್ಧ ಹರಿಹಾಯ್ದ ಸವದಿ

ಬೆಳಗಾವಿ : ರಾಜಕೀಯದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು ಆದರೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಜಕಾರಣ ಎದ್ದು ಕಾಣುತ್ತಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.

ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಶ್ರೀರಾಮ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಸ್ವತ್ತಲ್ಲ. ಆದರ್ಶ ಪುರುಷ ರಾಮನನ್ನು ರಾಜಕಾರಣಕ್ಕೆ ಬಳಿಸಿಕೊಳುವದು ಸಮಂಜಸವಲ್ಲ.

ರಾಮ ಮಂದಿರ ಕಾರ್ಯಕ್ರಮದಲ್ಲಿ ರಾಜಕಾರಣ ಬೆರೆಸಿ ಅದರ ಲಾಭವನ್ನು ಪಡೆದುಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನ ನಡೆದಿದೆ. ಈ ರೀತಿಯ ದಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಸೇರಿದ್ದು ನನಗೆ ಬೇಸರ ಮೂಡಿಸಿದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳು ಎಲ್ಲರ ಮನಸಿಗೆ ಒಪ್ಪುವಂತೆ ನಡೆಯಬೇಕು. ಆದರೆ ಒಂದು ಕೋಮು ಹಾಗೂ ಪಕ್ಷಕ್ಕೆ ಸೀಮಿತವಾಗಿ ನಡೆದಿದ್ದು ನನಗೆ ಬೇಸರ ಮೂಡಿಸಿದೆ.

ಶ್ರೀರಾಮನ ಭಕ್ತರು ಎಲ್ಲಾ ಪಕ್ಷದಲ್ಲಿ ಇದ್ದಾರೆ. ದೇಶದಲ್ಲಿ ಇರುವ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ರಾಮಭಕ್ತರು ಇದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

Advertisement

Leave a reply

Your email address will not be published. Required fields are marked *

error: Content is protected !!