Select Page

Advertisement

ಲಪಂಗ ರಾಜು ಹಾಸ್ಯ ಪಾತ್ರದಲ್ಲಿ ನಟಿಸಿರುವ ಕಿಡ್ನಾಪ್ ಕಾವ್ಯ ಚಲನಚಿತ್ರ ಆಗಸ್ಟ್ 1 ರಂದು ಬಿಡುಗಡೆ : ಷಡಕ್ಷರಿ ನೀಲಕಂಠಯ್ಯ

ಲಪಂಗ ರಾಜು ಹಾಸ್ಯ ಪಾತ್ರದಲ್ಲಿ ನಟಿಸಿರುವ ಕಿಡ್ನಾಪ್ ಕಾವ್ಯ ಚಲನಚಿತ್ರ ಆಗಸ್ಟ್ 1 ರಂದು ಬಿಡುಗಡೆ : ಷಡಕ್ಷರಿ ನೀಲಕಂಠಯ್ಯ

ಗೋಕಾಕ : ಉತ್ತರ ಕರ್ನಾಟಕದ ಹಾಸ್ಯ ಪ್ರತಿಭೆ ಲಪಂಗ ರಾಜು ಅವರು ಹಾಸ್ಯ ಪಾತ್ರದಲ್ಲಿ ನಟಿಸಿರುವ ಕಿಡ್ನಾಪ್ ಕಾವ್ಯ ಚಲನಚಿತ್ರ ಆಗಸ್ಟ್ 1 ರಂದು ಬಿಡುಗಡೆ ಆಗುತ್ತಿದ್ದು, ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ಚಲನಚಿತ್ರ ವಿಕ್ಷೀಸಿ ಆರ್ಶೀವದಿಸಬೇಕು ಎಂದು ಚಿತ್ರ ನಿರ್ದೇಶಕ ಷಡಕ್ಷರಿ ನೀಲಕಂಠಯ್ಯ ಹೇಳಿದರು

ಮಂಗಳವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಿಡ್ನಾಪ್ ಕಾವ್ಯ ಚಲನಚಿತ್ರದಲ್ಲಿ ಹುಬ್ಬಳಿಯ ರಾಜವಂಶಿ ಅವರನ್ನು ಚಿತ್ರದ ನಾಯಕ ನಟನರನ್ನಾಗಿ ಮತ್ತು ಗೋಕಾಕನ ಹಾಸ್ಯಕಲಾವಿದ ಯೂಟ್ಯೂಬರ್ ಲಪಂಗ ರಾಜು ಅವರನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಒಂದು ಸುಂದರ ಹಾಸ್ಯಭರಿತ ಚಿತ್ರವನ್ನು ನಿರ್ದೇಶಿಸಲಾಗಿದೆ.

ಆಗಸ್ಟ್ 1 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಉತ್ತರ ಕರ್ನಾಟಕದ ಜನರು ಕಳೆದ ಹಲವು ದಶಕಗಳಿಂದ ಚಲನಚಿತ್ರಗಳನ್ನು ಉಳಿಸಿ ಬೆಳೆಸಿದ್ದಾರೆ ಹಾಗಾಗಿ ಈ ಚಿತ್ರವನ್ನು ಸಹ ಅವರು ನೋಡುವ ಮೂಲಕ ಈ ಭಾಗದ ಕಲಾವಿದರನ್ನು ಮತ್ತು ನಮ್ಮನ್ನು ಬೆಳೆಸಬೇಕು ಎಂದು ಕೋರಿದರು.

ಪತ್ರಕಾಗೋಷ್ಠಿಯಲ್ಲಿ ಹಾಸ್ಯ ನಟ ಲಂಪಗ ರಾಜು, ಸಹ ನಿರ್ದೇಶಕ ಮತ್ತು ಚಿತ್ರದ ಖಳನಾಯಕ ವಿಜಯ ಕುಮಾರ, ಮಹಾಂತೇಶ ತಾವಂಶಿ, ರಜನಿ ಜಿರಗ್ಯಾಳ, ಕಿಶೋರ್ ಭಟ್ ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!