ನಿಧಿ ಸಿಕ್ಕ ಪ್ರಕರಣ ; ಉತ್ಖನನಕ್ಕೆ ಮುಂದಾದ ಸರಕಾರ

ಗದಗ : ನೂರಾರು ಐತಿಹಾಸಿಕ ಸ್ಮಾರಕ ಹಾಗೂ ದೇವಸ್ಥಾನಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸ್ಥಳ ಲಕ್ಕುಂಡಿ. ನಿಧಿ ಪತ್ತೆಯಾದ ಬೆನ್ನಲ್ಲೇ ಇದೀಗ ಲಕ್ಕುಂಡಿಯಲ್ಲಿ (Lakkundi) ಉತ್ಖನನ (Excavation) ಕಾರ್ಯ ಆರಂಭವಾಗಲಿದೆ.
ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನ (Kote Veerabhadreshwara Tempel) ಬಳಿ ಉತ್ಖನನಕ್ಕೆ ಪ್ಲಾನ್ ಮಾಡಲಾಗಿದೆ. ಇಂದಿನಿಂದ ಲಕ್ಕುಂಡಿಯಲ್ಲಿ ಉತ್ಖನನ ಆರಂಭ ಆಗಲಿದೆ.
ಗದಗ ಜಿಲ್ಲೆಯ ಲಕ್ಕುಂಡಿ ತನ್ನದೆ ಆದ ಇತಿಹಾಸವನ್ನು ಹೊಂದಿದೆ. ಕಲ್ಯಾಣ ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರು, ಕಳಚೂರಿಗಳು, ವಿಜಯನಗರ ಅರಸರು, ದಾನಚಿಂತಾಮಣಿ ಅತ್ತಿಮಬ್ಬೆ ಆಳಿದ ನಾಡು.
ಈ ನಾಡು ಕೇವಲ ಶಿಲ್ಪಕಲೆಗೆ ಅಷ್ಟೇ ಹೆಸರಾಗಿಲ್ಲ. ಸಾಕಷ್ಟು ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳ ಸಂಪತ್ತನ್ನು ತನ್ನೊಡಲೊಳಗೆ ಲೆಕ್ಕವಿಲ್ಲದಷ್ಟು ಹುದುಗಿಟ್ಟುಕೊಂಡಿದೆ. ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದ್ದ ಬೆನ್ನಲ್ಲೇ ಈಗ ಮತ್ತೊಮ್ಮೆ ಉತ್ಖನನಕ್ಕೆ ಮುಂದಾಗಿದೆ.
ಪ್ರವಾಸೋದ್ಯಮ ಇಲಾಖೆ, ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಉತ್ಪನನ ನಡೆಯಲಿದೆ.

