ಬೆಂಗಳೂರು : ಜೈಲು ಕೈದಿಗೆ ಬೆತ್ತಲೆ ವೀಡಿಯೋ ಕಾಲ್ ಮಾಡಿದ್ದ ಆರೋಪ ಹೊತ್ತಿದ್ದ ಲೇಟಿ ಇನ್ಸ್ಪೆಕ್ಟರ್ ಕೊನೆಗೂ ಅಮಾನತುಗೊಂಡಿದ್ದಾರೆ. ಇಲಾಖೆ ತನಿಖೆ ನಂತರ ಈಕೆಯನ್ನು‌ ಕೆಲಸದಿಂದ ವಜಾ ಮಾಡಲಾಗಿದೆ.

ಹೌದು ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಕೈದಿಯೋರ್ವನ ಜೊತೆ ವೀಡಿಯೋ ಕಾಲ್ ನಲ್ಲಿ ಬೆತ್ತಲೆ ಆಗಿದ್ದ ಆರೋಪದ ಮೇಲೆ ಇನ್ಸ್ಪೆಕ್ಟರ್ ಜಯಶ್ರೀ ಅವರದ್ದೇ ಎನ್ನಲಾದ ವೀಡಿಯೋ ವೈರಲ್ ಆಗಿದ್ದವು. ಅಷ್ಟೇ ಅಲ್ಲದೆ ಕೈದಿಗಳ‌ ಜೊತೆ ಹಣಕಾಸು ವ್ಯವಹಾರ ಕೇಳಿಬಂದಿದ್ದವು.

ಈ ಕುರಿತು ಪೊಲೀಸ್ ಇಲಾಖೆ ಆಂತರಿಕ ವಿಚಾರಣೆ ನಡೆಸಿತ್ತು. ಸಧ್ಯ ವಿಚಾರಣೆ ನಡೆಸಲಾಗಿದ್ದು ಆಂತರಿಕ ಭದ್ರತಾ ವಿಭಾಗದ ಐಜಿಪಿ ಅವರು ಇನ್ಸ್ಪೆಕ್ಟರ್ ಜಯಶ್ರೀಯ‌ನ್ನು ವಜಾಗೊಳಿಸಿದ್ದಾರೆ.

ಕೈದಿಯ ಜೊತೆಗಿನ‌ ಬೆತ್ತಲೆ ವೀಡಿಯೋ ಕಾಲ್ ಬಹಿರಂಗಗೊಂಡ ನಂತರದಲ್ಲಿ ಆತನ ಕೊಲ್ಲುವ ಆಡಿಯೋ ಸಾಕಷ್ಟು ವೈರಲ್ ಆಗಿತ್ತು. ಕಿಲಾಡಿ ಪೊಲೀಸ್ ಆಟಕ್ಕೆ ಕೊನೆಗೂ ಇಲಾಖೆ ಸರಿಯಾದ ಶಿಕ್ಷೆ ನೀಡಿದೆ.

ಈ ಮಹಿಳಾ ಪೊಲೀಸ್ ಅಧಿಕಾರಿ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾಡಿದ್ದ ಅವಾಂತರಗಳ ಕುರಿತು ನಿಮ್ಮ ಬೆಳಗಾವಿ ವಾಯ್ಸ್ ಈ ಹಿಂದೆ ಸಾಕಷ್ಟು ಮಾಹಿತಿ ಹೊರಹಾಕಿತ್ತು. ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಕೆಯನ್ನು ಅಮಾನತು ಮಾಡಲಾಗಿದೆ.