Select Page

Advertisement

ಸಿದ್ದರಾಮಯ್ಯ ಸಿಎಂ ಆಗಿರುವರೆಗೆ ಮೀಸಲಾತಿ ಕೇಳಲ್ಲ ; ಪಂಚಮಸಾಲಿ ಶ್ರೀ

ಸಿದ್ದರಾಮಯ್ಯ ಸಿಎಂ ಆಗಿರುವರೆಗೆ ಮೀಸಲಾತಿ ಕೇಳಲ್ಲ ; ಪಂಚಮಸಾಲಿ ಶ್ರೀ

ಅಥಣಿ : ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರೆಗೆ ಪಂಚಮಸಾಲಿ ಸಮುದಾಯ 2 ಎ ಮೀಸಲಾತಿ ಕೇಳುವುದಿಲ್ಲ ಎಂದು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸರಕಾರ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದೆ. ಅಧಿವೇಶನ ವೇಳೆ ಲಾಠಿ ಚಾರ್ಜ್ ಮಾಡಿದೆ. ಈ ಕಾರಣಕ್ಕೆ ನಾವು ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಮೀಸಲಾತಿ ಕೇಳುವುದಿಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸರಕಾರ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದೆ. ಅಧಿವೇಶನ ವೇಳೆ ಲಾಠಿ ಚಾರ್ಜ್ ಮಾಡಿದೆ. ಈ ಕಾರಣಕ್ಕೆ ನಾವು ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಮೀಸಲಾತಿ ಕೇಳುವುದಿಲ್ಲ ಎಂದರು.

ಬೆಳಗಾವಿ ಚಳಿಗಾಲ ಅಧಿವೇಶನ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತರಲು ಅರ್ಜಿ ಸಲ್ಲಿಸಿದ್ದ ರಾಜ್ಯ ಸರಕಾರದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು ಹೈಕೋರ್ಟ್ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದರು .

ಕಾನೂನು ಬಾಹಿರವಾಗಿ ಪೊಲಿಸರಿಗೆ ಕುಮ್ಮಕ್ಕು ಕೊಟ್ಟು ಪ್ರತಿಭಟನಾಕಾರರ ಮೇಲೆ ಮಾರಣಾಂತಿವಾದಂತಹ ಹಲ್ಲೆಯನ್ನ ಸರಕಾರ ಮಾಡಿಸಿತ್ತು,ಕಾನೂನು ಬಾಹಿರವಾಗಿ ಹಲ್ಲೆ ಮಾಡಿರುವಂತಹ ಅಧಿಕಾರಿಗಳನ್ನ ಅಮಾನತ್ತು ಮಾಡಬೇಕೆಂದು ನಾವು ಆಗ್ರಹಿಸಿದ್ದೇವು,ಕೆಲ ಸಮಾಜದ ನಾಯಕರು ಅಧಿವೇಶನದಲ್ಲು ಪೊಲಿಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.

ಈ ವೇಳೆ ಹಿರಿಯ ವಕೀಲರಾದ ಬಿ.ಎಲ್.ಪಾಟೀಲ, ಶಶಿಕಾಂತ ಗುರೂಜಿ , ಡಾ.ಪ್ರಕಾಶ ಕುಮಠಳ್ಳಿ,ನ್ಯಾಯವಾದಿ ಎ.ಎ.ಹುದ್ದಾರ, ಸುಭಾಷ ನಾಯಿಕ , ಸುನೀಲ ಸಂಕ ,ಡಿ.ಬಿ.ಠಕ್ಕಣ್ಷವರ ಮಾತನಾಡಿದರು , ಬಾಳೇಶ ಬಿಸಲಾಪುರ ಸ್ವಾಗತಿಸಿ ವಂದಿಸಿದರು .

Advertisement

Leave a reply

Your email address will not be published. Required fields are marked *

error: Content is protected !!