ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ ; ಓರ್ವ ನೀರು ಪಾಲು
ಚಿಕ್ಕೋಡಿ : ಕುಡಚಿ ಪಟ್ಟಣದ ಹೊರ ವಲಯದ ಕೃಷ್ಣಾ ನದಿಯಲ್ಲಿ ಮೂವರು ಯುವಕರು ನೀರುಪಾಲಾಗುತ್ತಿದ್ದ ಸಂದರ್ಭದಲ್ಲಿ ಇಬ್ಬರ ರಕ್ಷಣೆ ಮಾಡಲಾಗಿದ್ದು ಓರ್ವನಿಗಾಗಿ ಹುಡುಕಾಟ ಮುಂದುವರಿದಿದೆ.
ರವಿವಾರ ಶಾಲೆಗೆ ರಜೆ ಇದ್ದ ಹಿನ್ನಲೆ ಕುಟುಂಬ ಸಮೇತ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಗಡ್ಡೆಯ ಸಿರಾಜುದ್ದೌಲ ದರ್ಗಾಗೆ ತೆರಳಿದ್ದರು. ಸಂಜೆ ಮನೆಗೆ ತೆರಳುವ ಮುನ್ನ ನದಿ ದಡದಲ್ಲಿ ಕುಳಿತಿದ್ದ ಮೂವರಲ್ಲಿ ಓರ್ವ ಯುವಕನ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಸ್ನೇಹಿತನ ರಕ್ಷಣೆಗೆ ಹೋದ ಇಬ್ಬರು ಸೇರಿ ಮೂವರು ನೀರು ಪಲಾಗಿದ್ದಾರೆ.
ನಂತರ ಸ್ಥಳೀಯ ಮೀನುಗಾರರ ಸಹಾಯದಿಂದ ಇಬ್ಬರ ಜೀವ ರಕ್ಷಣೆ ಮಾಡಲಾಗಿದ್ದು ಓರ್ವ ಯುವಕ ಹುಸೇನ್ ಎಂಬಾತ ನಾಪತ್ತೆಗಿದ್ದಾನೆ. ಈ ಸಂಬಂಧಿಸಿದಂತೆ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.


