ಕೃಷಿ ಸಮ್ಮಾನ್ ಯೋಜನೆ ಕೈ ಬಿಡುತ್ತಾ ಕಾಂಗ್ರೆಸ್ ಸರ್ಕಾರ – 2000 ರೂ ನೀಡುವ ಯೋಜನೆ ಸ್ಥಗಿತ..?
ಬೆಂಗಳೂರು : ಗ್ಯಾರಂಟಿ ಯೋಜನೆಯಿಂದ ಹೈರಾಣಾದ ಕಾಂಗ್ರೆಸ್ ಜನರಿಗೆ ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಡುವೆ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಕೊಡುತ್ತಿದ್ದ ಸಹಾಯಧನ ನಿಲ್ಲಿಸುತ್ತಾ ಕಾಂಗ್ರೆಸ್ ಎಂಬ ಮಾತು ಕೇಳಿಬರುತ್ತಿವೆ.
ಯಡಿಯೂರಪ್ಪ ಸರ್ಕಾರ ಅವಧಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನಾಲ್ಕು ಸಾವಿರ ರೂ ಸಹಾಯದನ ನೀಡುತ್ತಿತ್ತು. ಕೇಂದ್ರ ಸರ್ಕಾರ 6 ಸಾವಿರದ ಜೊತೆ ಈ ಯೋಜನೆ ಮುಂದುವರಿದಿತ್ತು. 2023 – 24 ನೇ ಸಾಲಿನ ನೊಂದಾಯಿತ ರೈತರ ಸಂಖ್ಯೆ 54,92754 ಇದ್ದು ಸರ್ಕಾರದ ಅನುದಾನ ಪಡೆಯುತ್ತಿದ್ದಾರೆ.
ಈ ಯೋಜನೆ ಸ್ಥಗಿತಗೊಳಿಸಿ, ಕಾಂಗ್ರೆಸ್ ಗ್ಯಾರಂಟಿಯಲ್ಲಿ ಒಂದಾದ ಯುವನಿಧಿ ಅಥವಾ ಉಚಿತ ಬಸ್ ಪಾಸ್ ಯೋಜನೆ ಕೊಡಲು ಅನುಕೂಲ ಆಗುವ ಮಾತು ಕೇಳಿಬರುತ್ತಿದೆ. ಆದರೆ ರೈತರ ವಿಷಯದಲ್ಲಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದರೆ ಮುಂದಿನ ಪರಿಣಾಮ ಅನುಭವಿಸಬೇಕಾದ ಒತ್ತಡವೂ ಇದ್ದು ಯಾವ ಕ್ರಮ ಕೈಗೊಳ್ಳುವರು ಎಂದು ಕಾದು ನೋಡಬೇಕು.


