
ಪರಿಸರ ಸಂರಕ್ಷಣೆ ಎಲ್ಲರ ಹೊಣೆ – ಮೋಹನ ಕಾರಜೋಳ

ಖಾನಾಪುರ : ಭಾರತ ಸರ್ಕಾರದ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ಬೆಳಗಾವಿ ವತಿಯಿಂದ ಸ್ವಚ್ಛತಾ ಪಕವಾಡ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ, ಗ್ರಾಮ ಪಂಚಾಯತ ಗೊರವನಕೊಳ್ಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊರವನಕೊಳ್ಳ ಇವರ ಸಯುಕ್ತ ಆಶ್ರಯದಲ್ಲಿ
ಪರಿಸರದ ಕುರಿತು ಪ್ಲಾಸ್ಟಿಕ್ ತ್ಯಜಿಸಿ ಕುರಿತು ಬೀದಿ ನಾಟಕ. ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸವದತ್ತಿ ರವರಿಂದ ಉಚಿತ ಕಣ್ಣಿನ ತಪಾಸನ ಶಿಬಿರ. ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮ ಉದ್ಘಾಟಿಸಿದ ಸಾಂಘಿಕ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ ಕಾರಜೋಳ ಮಾತನಾಡಿ. ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಬೇಕು ಸ್ವಚ್ಛ ಭಾರತದ ಕಲ್ಪನೆ ಎಲ್ಲರಲ್ಲಿ ಬರಬೇಕು.
ಪರಿಸರ ಸಂರಕ್ಷಣೆ ಕುರಿತು ಪ್ರತಿಯೊಬ್ಬರು ತಮ್ಮ ಸೇವೆ ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಸನ್ನಕುಮಾರ್ ಇನಾಮದಾರ, ರಾಜಶೇಖರ ಹಿರೇಮಠ, ನಾಗಪ್ಪ ಕಾಂಬಳೆ, ರಾಜೇಂದ್ರ ಇನಾಮದಾರ, ಬಾಬುಸಾಬ ಮುಲ್ಲಾ, ಪಿಡಿಓ ಶಂಕರಗೌಡ ಹೊಸಮನಿ, ಲಚ್ಚಪ್ಪ ಮಲ್ಲಾಡ, ಆಶಾ ಕಾರ್ಯಕರ್ತೇಯರು, ಶಾಲಾ ವಿದ್ಯಾರ್ಥಿಗಳು, ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾಗೇಂದ್ರ ಚೌಗಲಾ ನಿರೂಪಿಸಿದರು. ಫಕ್ರುಸಾಬ್ ಮುಲ್ಲಾ ಸ್ವಾಗತಿಸಿದರು. ಕೇದಾರಲಿಂಗ ಸಂಭೋಜಿ ವಂದಿಸಿದರು.