
ಕತ್ತಿ – ಜಾರಕಿಹೊಳಿ ಬೆಂಬಲಿಗರ ಹೊಡೆದಾಟ ; ಹರಿದ ನೆತ್ತರು

ಬೆಳಗಾವಿ : ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನದ ಚುನಾವಣಾ ಕಣ ರಂಗೇರಿದ್ದು ಕತ್ತಿ ಹಾಗೂ ಜಾರಕಿಹೊಳಿ ಕುಟುಂಬದ ನಡುವೆ ಆರ್ಭಟ ಮುಂದುವರಿದಿದೆ. ಇಬ್ಬರು ಪ್ರಬಲ ನಾಯಕರ ಮಧ್ಯೆ ನಡೆಯುತ್ತಿರುವ ಈ ಕಾಳಗ ಸಾಕಷ್ಟು ಕುತೂಹಲ ಮೂಡಿಸಿದೆ.
ಹುಕ್ಕೇರಿ ತಾಲೂಕಿನ ಅಂಕಲಗುಡಿಕ್ಷೇತ್ರ ಗ್ರಾಮದ ಪಿಕೆಪಿಎಸ್ ಠರಾವು ಪಾಸ್ ಮಾಡುವ ವಿಚಾರವಾಗಿ ಗಲಾಟೆ ಏರ್ಪಟ್ಟಿದೆ.
ಬೆಳಗಾವಿ ಹಾಗೂ ಗೋಕಾಕ್ ಭಾಗದಿಂದ ಬಂದಿದ್ದ ಜಾರಕಿಹೊಳಿ ಬೆಂಬಲಿಗರು ಹಾಗೂ ಕತ್ತಿ ಕುಟುಂಬದ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ.
ಈ ನಡುವೆ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಕೈ, ಕೈ ಮಿಲಾಯಿಸಿದ್ದಾರೆ. ಈ ವೇಳೆ ಉಂಟಾದ ಘರ್ಷಣೆಯಲ್ಲಿ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೊತೆಗೆ ವಾಹನಗಳು ಡ್ಯಾಮೆಜ್ ಆಗಿವೆ.
ಇನ್ನೂ ಗಲಾಟೆ ಸಂಭವಿಸಿದರೂ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸದೆ ಕೆಲವರ ಮತು ಕೇಳುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದಕೆಲ್ಲ ಜಿಲ್ಲಾಡಳಿತವೇ ಕಾರಣ ಎಂದು ಶಾಸಕ ನಿಖಿಲ್ ಕತ್ತಿ ಆರೋಪಿಸಿದ್ದಾರೆ. ಇನ್ನೂ ಹುಕ್ಕೇರಿ ತಾಲೂಕಿನ ಹಲವೆಡೆ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ.