Select Page

Advertisement

ಹೃದಯಾಘಾತ ; ಕಾಲೇಜು ಉಪ ಪ್ರಾಂಶುಪಾಲ ಸಾವು

ಹೃದಯಾಘಾತ ; ಕಾಲೇಜು ಉಪ ಪ್ರಾಂಶುಪಾಲ ಸಾವು

ಕಲಬುರಗಿ : ಹೃದಯಾಘಾತದಿಂದ ಕಾಲೇಜು ಉಪ ಪ್ರಾಂಶುಪಾಲ ಸಾವಣಪ್ಪಿರುವ ಘಟನೆ ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯಲ್ಲಿ ಸಂಭವಿಸಿದೆ.

ಗುರುಬಸಯ್ಯ ಸಾಲಿಮಠ ( 51 ) ಗುರುವಾರ ಮೃತಪಟ್ಟಿದ್ದಾರೆ. ನಗರದ ಕೋಹಿನೂರು ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬೆಳಿಗ್ಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ಬಂದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ. ನೀರು ಕುಡಿದ ನಂತರ ವಾಂತಿಯಾಗಿದ್ದು ತೀವ್ರ ಹೃದಯಾಘಾತ ಸಂಭವಿಸಿದೆ.

ಮೃತರ ಅಂತ್ಯಕ್ರಿಯೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ‌ ಭಯ್ಯಾರದಲ್ಲಿ ನಡೆಯಲಿದೆ. ಹೃದಯಾಘಾತದಿಂದ ಸಾವಿನ ಸರಣಿ ಮುಂದುವರಿದಿದ್ದು ನಿರಂತರವಾಗಿ ವರದಿಯಾಗುತ್ತಿವೆ.

Advertisement

Leave a reply

Your email address will not be published. Required fields are marked *

error: Content is protected !!