ಸರ್ಕಾರಿ ಶಾಲಾ ಶಿಕ್ಷಕನ ವರ್ಗಾವಣೆ ; ಕಣ್ಣೀರು ಹಾಕಿದ ವಿದ್ಯಾರ್ಥಿಗಳು
ಕಾಗವಾಡ : ಸುದೀರ್ಘ 18 ವರ್ಷ ಜಂಬಗಿ ಗ್ರಾಮದ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಮಹೇಶ ಜಾದವ್ ವರ್ಗಾವಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಹಾಗೂ ಸಹಾಯಕಿ ವರ್ಗಾವಣೆ ಬೆನ್ನಲ್ಲೆ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಮಕ್ಕಳು ಕಣ್ಣೀರು ಹಾಕಿ ಹೂವಿನ ಸುರಿಮಳೆ ಗೈದು ಬೀಳ್ಕೊಟ್ಟರು.
ಶಿಕ್ಷಕ ಹಾಗೂ ಡಿ ದರ್ಜೆ ಸಹಾಯಕಿ ತುಂಗಭದ್ರಾ ಅವರ ಮಕ್ಕಳ ನಡುವಿನ ಅವಿನಾಭಾವ ಸಂಬಂಧಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.


