ಅಣ್ಣಾಸಾಹೇಬ್ ಜೊಲ್ಲೆ ನಾಮಪತ್ರ ತಿರಸ್ಕರಿಸುವಂತೆ ಆಗ್ರಹಿಸಿದ ವಕೀಲ..!
ಬೆಳಗಾವಿ : ಬೆಳಗಾವಿ ಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಹಕಾರಿ ತತ್ವದ ವಿರೋಧಿ ಹೇಳಿಕೆ ನೀಡಿರುವ ಆರೋಪದ ಹಿನ್ನಲೆಯಲ್ಲಿ ನಿಪ್ಪಾಣಿಯಿಂದ ಸ್ಪರ್ಧಿಸಿರುವ ಅಣ್ಣಾಸಾಹೇಬ್ ಜೊಲ್ಲೆ ನಾಮಪತ್ರ ತಿರಸ್ಕರಿಸುವಂತೆ ವಕೀಲ ಮಲ್ಲಿಕಾರ್ಜುನ ಚೌಕಶಿ ಆಗ್ರಹಿಸಿದ್ದಾರೆ.
ಕಳೆದ ಸಪ್ಟೆಂಬರ್ 18 ರಂದು ಸಂಕೇಶ್ವರದ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆ ಸಾಮಾನ್ಯ ಸಭೆಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಭಾಗವಹಿಸಿ ಮಾತನಾಡುವಾಗ, ಬರುವ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ತಮ್ಮ ಬಣದವರು ಆಯ್ಕೆ ಆಗುತ್ತಾರೆ ನಮ್ಮ ವಿರೋಧಿಗಳಿಗೆ ಯಾವುದೆ ಕೃಷಿ ಸಾಲ, ಟ್ರ್ಯಾಕ್ಟರ್ ಸಾಲ ನೀಡುವುದಿಲ್ಲ ಎನ್ನುತ್ತಾರೆ. ಆದ್ಧರಿಂದ ಬ್ಯಾಂಕಿನ ತತ್ವ ಸಿದ್ಧಾಂತ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಕೂಡಲೇ ಇವರ ನಾಮಪತ್ರ ತಿರಸ್ಕರಿಸಿ ಸಾಮಾಜಿಕ ಹಾಗೂ ಸಹಕಾರ ನ್ಯಾಯ ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

