ಪಾಠ ಮಾಡುವಾಗಲೇ ಹೃದಯಾಘಾತ ; ಶಿಕ್ಷಕ ಗುರುಪಾದ ಸಾವು
ಬಾಗಲಕೋಟೆ : ಪಾಠ ಮಾಡುವ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವಣಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆದಿದೆ.
ಜಮಖಂಡಿ ಪಟ್ಟಣದ ತುಂಗಳ ಹೈಸ್ಕೂಲ್ ನಲ್ಲಿ ಪಾಠ ಮಾಡುವ ವೇಳೆ ಕನ್ನಡ ಶಿಕ್ಷಕ ಗುರುಪಾದ ಹಿಪ್ಪರಗಿ ( 49 ) ಏಕಾಏಕಿ ಕುಸಿದು ಬಿದ್ದು ಸಾವಣಪ್ಪಿದ್ದಾರೆ.
ಶಿಕ್ಷಕ ಗುರುಪಾದ ಅವರು ಕುಸಿದು ಬೀಳುತ್ತಿದ್ದಂತೆ ಸಹ ಶಿಕ್ಷಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ಶಿಕ್ಷಕ ಮೃತಪಟ್ಟಿದ್ದಾಗಿ ದೃಢವಾಗಿದೆ.


