ಉಗ್ರರ ವಿರುದ್ಧ ಇಸ್ರೇಲ್ ಸಮರ ; ಸಾವಿನ ಸಂಖ್ಯೆ ಕೇಳಿದರೆ ಅಚ್ಚರಿ. ಯುದ್ಧಕ್ಕೆ ಏನು ಕಾರಣ..?
ಪ್ಯಾಲೆಸ್ತೇನ್ ಮೂಲದ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸಾರಿರುವ ಸಂಪೂರ್ಣ ಯುದ್ಧ ಭಾನುವಾರ 2 ನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ಕಡೆಯಿಂದ ದಾಳಿ ತೀವ್ರವಾಗಿ ನಡೆದಿದ್ದು, ಸಾವು ನೋವು ಸಂಭವಿಸುತ್ತಿವೆ. ( IsraelPalestineWar )
ಹಮಾಸ್ ಉಗ್ರರಿಂದ ಹಿಂದೆಂದೂ ಕಾಣದಂತಹ ಘೋರ ದಾಳಿಗೆ ಒಳಗಾಗಿರುವ ಇಸ್ರೇಲ್ 44 ಸೈನಿಕರು 30 ಭದ್ರತಾಪಡೆ ಅಧಿಕಾರಿಗಳು 525 ಅಧಿಕ ನಾಗರಿಕರನ್ನು ಕಳೆದುಕೊಂಡಿದೆ. ಸೈನಿಕರು ನಾಗರಿಕರು ಸೇರಿ 2048 ಮಂದಿ ಗಾಯಗೊಂಡಿದ್ದಾರೆ.
ಹಳೆಯ ಹಗೆತನ ಇಟ್ಟುಕೊಂಡು ವರ್ಷಗಳ ಸಿಟ್ಟಿನ ಜೊತೆ, ಸುನ್ನಿ ಮುಸ್ಲಿಂ ದೇಶದವ ವಿರುದ್ಧ ಯಹೂದಿಗಳ ದೇಶವಾದ ಇಸ್ರೇಲ್ ಹಗೆತನ ಹೊಂದಿದೆ. ಈ ಎಲ್ಲಾ ಕಾರಣಗಳಿಂದ ಇಸ್ರೇಲ್ ಮೇಲೆ ಪ್ಯಾಲೆಸ್ತೇನ್ ದಾಳಿ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್ ತಿರುಗೇಟು ನೀಡಿದೆ.
ಇಸ್ರೇಲ್ ಕ್ಷಿಪಣಿ ದಾಳಿಗೆ ಗಾಜಾಸ್ಟ್ರೀಪ್ ಬೃಹತ್ ಕಟ್ಟಡ ನೆಲಸಮವಾಗಿದೆ. ಈವರೆಗೆ ಇಸ್ರೇಲ್ ನ 44 ಯೋಧರು ಹಾಗೂ 30 ಅಧಿಕಾರಿಗಳು ಸಾವಣಪ್ಪಿದ್ದಾರೆ. ದಾಳಿ ಕೊನೆಗೊಳಿಸಲು ಹಮಾಸ್ ಯೋಧರು ಷರತ್ತು ವಿಧಿಸಿದ್ದು ಇಸ್ರೇಲ್ ಮಾತ್ರ ನಿರಂತರ ದಾಳಿ ಮುಂದುವರಿಸಿದೆ.
ಹಮಾಸ್ ದಾಳಿಗೆ ಇಸ್ರೇಲ್ ಅಕ್ಷರಶಃ ನಲುಗಿದೆ. ಶನುವಾರ ಬೆಳಗಿನ ವೇಳೆಗೆ ಇಸ್ರೇಲ್ ಸಮುದ್ರ ಮಾರ್ಗ ಹಾಗೂ ಭೂಮಾರ್ಗದಲ್ಲಿ ದಾಳಿ ನಡೆಸಿದೆ. 5 ಸಾವಿರ ಕ್ಕೂ ಅಧಿಕ ಕ್ಷಿಪಣಿ ಉಡಾವಣೆ ಮಾಡಿದ್ದು, ಇಸ್ರೇಲ್ ವಿರುದ್ಧ ಹಮಾಸ್ ಉಗ್ರರ ಜೊತೆ ಹಿಜ್ಬುಲ್ ಉಗ್ರ ಸಂಘಟನೆ ಕೂಡಾ ಕೈಜೋಡಿಸಿದೆ.


