
ಭಾರತದ ಯೋಧನನ್ನು ವಶಕ್ಕೆ ಪಡೆದ ಪಾಕಿಸ್ತಾನ ಸೇನೆ : ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ನವದೆಹಲಿ : ಆಕಸ್ಮಿಕವಾಗಿ ಗಡಿ ದಾಟಿದ್ದ ಭಾರತೀಯ ಯೋಧನನ್ನು ಪಾಕ್ ಸೇನೆ ವಶಕ್ಕೆ ಪಡೆದಿರುವ ಘಟನೆ ಪಂಜಾಬ್ ಗಡಿಯಲ್ಲಿ ನಡೆದಿದೆ.
ಬಿಎಸ್ಎಫ್ ಯೋಧ ಪಿ.ಕೆ ಸಿಂಗ್ ಎಂಬವವರು ಪಂಜಾಬ್ ಬಳಿಯ ಅಂತರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿ ಪಾಕಿಸ್ತಾನ ನೆಲದಲ್ಲಿ ಕಾಲಿಟ್ಟ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ವಶಕ್ಕೆ ಪಡೆದುಕೊಂಡಿದೆ.
182 ಬಟಾಲಿಯನ್ ಕಾನ್ಸ್‌ಟೇಬಲ್ ಆಗಿರುವ ಯೋಧನನ್ನು ಪಂಜಾಬ್ ಫಿರೋಜ್ ಪೂರ ಗಡಿಯಲ್ಲಿ ಪಾಕಿಸ್ತಾನ ರೇಂಜರ್ಸ್ ಬಂದಿಸಿದ್ದಾರೆ. ಸಧ್ಯ ಯೋಧನ ಬಿಡುಗಡೆಗೆ ಭಾರತ ಕಸರತ್ತು ನಡಿಸಿದೆ.
ಇನ್ನೂ ಪಾಕಿಸ್ತಾನ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯರು ಮೃತಪಟ್ಟಿದ್ದು, ಪಾಕಿಸ್ತಾನದ ಕೈವಾಡ ಇರಿವುದು ಸ್ಪಷ್ಟವಾಗಿದೆ. ಸಧ್ಯ ಭಾರತ ಪಾಕಿಸ್ತಾನದ ಮೇಲೆ ಯಾವ ರೀತಿಯಲ್ಲಿ ದಾಳಿ ನಡೆಸುತ್ತದೆ ಎಂಬ ಕುತೂಹಲ ಭಾರತೀಯರಲ್ಲಿ ಮನೆಮಾಡಿದೆ.