ಹುಕ್ಕೇರಿ ಡಿಸಿಸಿ ಚುನಾವಣೆ ಮುಂದೂಡಲು ಅಸಲಿ ಕಾರಣ ಇಲ್ಲಿದೆ…!
ಬೆಳಗಾವಿ : ನಾಳೆ ಭಾನುವಾರ ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕಿನ ಏಳು ಕ್ಷೇತ್ರದ ನಿರ್ದೇಶಕ ಸ್ಥಾನದ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿತ್ತು. ಆದರೆ ಹೈಕೋರ್ಟ್ ನೀಡಿದ್ದ ಆದೇಶದ ಹಿನ್ನಲೆಯಲ್ಲಿ ಈಗ ಹುಕ್ಕೇರಿ ಕ್ಷೇತ್ರದ ಚುನಾವಣೆ ಮುಂದೂಡಲ್ಪಟ್ಟಿದೆ.
ಹೌದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಹಾಗೂ
ರಾಜೇಂದ್ರ ಪಾಟೀಲ್ ಸ್ಪರ್ಧಿಸಿರುವ ಹುಕ್ಕೇರಿ ಹೈ ವೋಲ್ಟೇಜ್ ಕ್ಷೇತ್ರವಾಗಿತ್ತು. ಆದರೆ ಹೈಕೋರ್ಟ್ ನೀಡಿರಿವ ಮಧ್ಯಂತರ ಆದೇಶದಿಂದ ಚುನಾವಣೆ ಮುಂದೆ ಹೋಗಿದೆ. ಅಷ್ಟೇ ಅಲ್ಲದೆ ಬೆಂಬಲಿತ ನಿರ್ದೇಶಕರ ಜೊತೆ ರೆಸಾರ್ಟ್ ಸೇರಿದ್ದ ನಾಯಕರಿಗೆ ಇನ್ನಷ್ಟು ದಿನ ಕಾಯುವಿಕೆ ಅನಿವಾರ್ಯವಾಗಿದೆ.
ಹುಕ್ಕೇರಿ ಪಿಕೆಪಿಎಸ್ ಸದಸ್ಯರಾಗಿರುವ ಭೀಮಸೇನ ಬಾಗಿ ಎಂಬುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಶುಕ್ರವಾರ ಧಾರವಾಡ ಹೈಕೋರ್ಟ್ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿದಾರರು ಹಾಗೂ ಸರಕಾದರ ಪರ ವಾದ ಆಲಿಸಲಾಗಿದ್ದು ಹೆಚ್ಚಿನ ವಿವರಣೆ ಕೇಳಲು ಅ. 28 ಕ್ಕೆ ಪ್ರಕರಣ ಮುಂದೂಡಿದ ಹಿನ್ನಲೆಯಲ್ಲಿ ಮುಂದಿನ ಆದೇಶ ಪ್ರಕಟಿಸುವ ವರೆಗೆ ಚುನಾವಣೆ ನಡೆದಂತೆ ಆದೇಶ ಹೊರಡಿಸಲಾಗಿದೆ.


