ಬೆಳಗಾವಿ : ಮರಾಠಿ‌ ಮಾತನಾಡಲು ಬರುವುದಿಲ್ಲ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಕಂಡಕ್ಟರ್ ‌ಮೇಲೆ‌ ಮರಾಠಿ ಭಾಷಿಕ ಪುಂಡರು ಹಲ್ಲೆ ನಡೆಸಿರುವ ಘಟನೆ ತಿರುವು ಪಡೆದುಕೊಂಡಿದೆ.

ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ವಿರುದ್ಧ ನಗರದ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.‌

ಹಲ್ಲೆ ನಡೆಸಿದ ಪುಂಡರು ತಮ್ಮ ವರಸೆ ಬದಲಿಸಿದ್ದು ಕಂಡಕ್ಟರ್ ಮೇಲೆ ಆರೋಪ‌ ಹೊರಸಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಕಂಡಕ್ಟರ್ ‌ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ ಎಂದು ಆರೋಪಿಸಿ ಪೋಕ್ಸೋ ‌ಪ್ರಕರಣ ದಾಖಲಿಸಿದ್ದಾರೆ.