
ಚುನಾವಣೆ ನೆಪದಲ್ಲಿ ಬಾಡೂಟ ; ಜಾರಕಿಹೊಳಿ ಸಹೋದರರಿಂದ ಸಂಸ್ಕಾರ ಹಾಳು ; ಗುಡುಗಿದ ಕತ್ತಿ ಸಾಹುಕಾರ

ಬೆಳಗಾವಿ : ಸಹಕಾರಿ ಸಂಘಗಳ ಚುನಾವಣೆ ನೆಪದಲ್ಲಿ ಹುಕ್ಕೇರಿ ಕ್ಷೇತ್ರದ ಹಲವೆಡೆ ಮದ್ಯ, ಮಾಂಸ ಸೇರಿದಂತೆ ಬಾಡೂಟ ಜೋರಾಗಿ ನಡೆಯುತ್ತಿದೆ. ಜಾರಕಿಹೊಳಿ ಸಹೋದರರು ಯುವಕರನ್ನು ಕೆಟ್ಟ ಮಾರ್ಗದತ್ತ ನಡೆಸುವ ಮೂಲಕ ಸಂಸ್ಕಾರ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಗಂಭೀರ ಆರೋಪ ಮಾಡಿದ್ದಾರೆ.
ತಾಲೂಕಿನ ಶಿರಗಾಂವ, ರಕ್ಷಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.
ತಾಲೂಕಿನ ಜನರಲ್ಲಿ ಸ್ವಾಮಿಮಾನ ಸಂಸ್ಕಾರ, ಆಚಾರ್ಯವಿಚಾರಗಳೊಂದಿಗೆ ಧಾರ್ಮಿಕ ಕಾರ್ಯಕ್ರಗಳ ಆಚರಣೆಗಳು ಮಡಿಯಿಂದ ಮಾಡುತ್ತಾರೆ.
ಸಹಕಾರಿ ಸಂಘದ ಚುನಾವಣೆ ನೆಪದಲ್ಲಿ ಜಮೀನುಗಳಲ್ಲಿ ಮತದಾರಿಗೆ ಮಧ್ಯ, ಮಾಂಸದಡಿಗೆಯ ಬಾಡೂಟಮಾಡಿಸುತಿದ್ದಾರೆ. ನವರಾತ್ರಿ ನಿಮಿತ್ಯವಾಗಿ ಎಲ್ಲರ ಮನೆಗಳಲ್ಲಿ ದೇವರಿಗೆ ದೀಪ ಹಚ್ಚಿದಾರೆ. ಜನರಿಗೆ ಮಧ್ಯ,ಮಾಂಸದೂಡ ಮಾಡಿಸಿದವರನ್ನು ತಾಯಿ ದುರ್ಗಾದೇವಿ ಸರಿಯಾದ ಬುದ್ದಿಕಲಿಸುತ್ತಾಳೆ ಎಂದು ಮಾಜಿ ಸಂಸದ ರಮೇಶ ಕತ್ತಿ ಅವರು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ಶಾಸಕ ಚುನಾಣೆ, ಸಹಕಾರಿ ಸಂಸ್ಥೆಗಳಲ್ಲಿ ಹಲಾವಾರು ವರ್ಷಗಳಿಂದ ಚುನಾವಣೆ ಜರುಗಿದ್ದರೂ ಕೂಡಾ ಯಾವುದೇ ಮಧ್ಯಸೇವನೆ, ಮಾಂಸ ಬಾಡೂಡ ನೇಡೆದಿಲ್ಲ. ಬೇರೆಯವರ ಮೀನದಲ್ಲಿ ಹೋತ, ಕುರಿ ಕೋಳಿ ಜೀವತೆಗೆದುಕೊಂಡು ಬಾಡೂಡಕ್ಕೆ ತಾಲೂಕಿನ ಮತದಾರರು ಮೊರೆಹೋಗಬಾರದು. ನವರಾತ್ರಿ ನಿಮತ್ಯವಾಗಿ ಮನೆಯಲ್ಲಿ ಮಹಿಳೆಯರು, ಪುರಷರು, ಉಪಾಸಮಾಡುವುದರ ಮೂಲಕ ದುರ್ಗಾದೇವಿ ಆರಾಧನೆ ಮಾಡುತ್ತಾರೆ. ಬಾಡೂಟಕ್ಕಾಗಿ ಮನೆಯಲ್ಲಿರುವ ಸಂಸ್ಕಾರ ಮುರಿಯಬಾರದು ಎಂದು ವಿನಂತಿಸಿದರು.
ಮನೆ ಮುರಿಯುವ ಸಂಸ್ಕಾರ ಮುಂದುವರೆದಿದೆ.
ಸ್ವಾಮಿಮಾನ ವಿಚಾರ ಸಂಸ್ಕಾರ ಇದೆ. ಮನೆಯಲ್ಲಿ ಮಡಿವಂತೆ ಮಾಡುತ್ತೇವೆ. ಹಿಂತ ಸಂಸರ್ಭದಲ್ಲಿ ಜಮೀನುಗಳಲ್ಲಿ ಮಾಂಸ ಮಧ್ಯಸೇವನೆ ಮಾಡಿ ಮತದಾರರಿಗೆ ದಾರಿ ತಪ್ಪಿಸಿ ಸಂಸ್ಕಾರ ಹಾಳು ಮಾಡುವ ಕುಂತಂತ್ರಿಗಳಿಗೆ ಮತದಾರರು ಸರಿಯಾದ ಬುದ್ದಿ ಕಳಿಸಬೇಕಾಗಿದೆ ಎಂದು ರಮೇಶ ಕತ್ತಿ ಹೇಳಿದರು.