Select Page

Advertisement

ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಸರ್ವ ಸಾಧರಣ ಸಭೆಯಲ್ಲಿ ಹೊಡೆದಾಟ..!

ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಸರ್ವ ಸಾಧರಣ ಸಭೆಯಲ್ಲಿ ಹೊಡೆದಾಟ..!

ಹುಕ್ಕೇರಿ : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿಎಸ್ ತುಬಚಿ ಶಿಕ್ಷಣ ಸಂಸ್ಥೆಯ ಸರ್ವ ಸಾಧಾರಣ ಸಭೆ ಬಡಿದಾಟಕ್ಕೆ ಸಾಕ್ಷಿಯಾಯಿತು.

ಸಂಸ್ಥೆಯ ಕಾಲೇಜು ವಿಭಾಗದ ಸಭಾ ಭವನದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೂಗಾಟ, ಚೀರಾಟ ಜೊತೆಗೆ ಪರಸ್ಪರ ಬಡಿದಾಡುವ ಮೂಲಕ ಗೊಂದಲದ ವಾತಾವರಣ ಸೃಷ್ಟಿಸಿತು.

ಸಂಸ್ಥೆಯಲ್ಲಿ ಏಕ ಪಕ್ಷೀಯವಾಗಿ ಆಡಳಿತ ಮಂಡಳಿಯ ಪುನರಚನೆ ಮಾಡಲಾಗಿದೆ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಶಿವರುದ್ರಪ್ಪ ( ಅನೀಲ ಶೆಟ್ಟಿ) ಕಾರ್ಯದರ್ಶಿ ಪಿಂಟು ಶೆಟ್ಟಿ ತನ್ನ ಕುಟುಂಬದ ಸದಸ್ಯರನ್ನೆ ನೂತನ ಸದಸ್ಯರನ್ನಾಗಿ ನೇಮಿಸಿಕೊಂಡು ಬಹುಮತ ಮಾಡಿಕೊಂಡು ಆಡಳಿತ ಮಂಡಳಿ ಬದಲಾವಣೆ ಮಾಡುತ್ತಿದ್ದಾರೆ ಎಂದು ಸದಸ್ಯ ಅಪುಶ ತುಬಚಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯ ಠರಾವ್ ಬುಕ್ ಸಭೆಯಲ್ಲಿ ತೋರಿಸುವಂತೆ ಅಪುಶ ತುಬಚಿ ಒತ್ತಾಯಿಸಿದಾಗ ಪಿಂಟು ಶೆಟ್ಟಿ ಬಣದ ಕೆಲ ಸದಸ್ಯರು ಅಪುಶ ತುಬಚಿ ಅವರ ಜೊತೆ ವಾಗ್ವಾದ ಏರ್ಪಟ್ಟಿತು. ಈ ಸಂದರ್ಭದಲ್ಲಿ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಕೆಲ ಸದಸ್ಯರ ಆಕ್ಷೇಪದ ನಡುವೆಯೂ ಬಹುಮತವಿದ್ದ ಕಾರಣ ಪಿಂಟು ಶೆಟ್ಟಿ ಬಣದ ಆಡಳಿತ ಮಂಡಳಿಯನ್ನ ಸರ್ವಾನುನತದಿಂದ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆಯ ಹೆಸರನ್ನ ಬದಲಿಸಿ ರವೀಂದ್ರ ಶೆಟ್ಟಿ ಶಿಕ್ಷಣ ಸಂಸ್ಥೆ ಎಂದು ಬದಲಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆ ಬಳಿಕ ಮಾತನಾಡಿದ ಅಪುಶ ತುಬಚಿ ಕಾನೂನು ಬಾಹೀರವಾಗಿ ಸಂಸ್ಥೆಯ ಸದಸ್ಯರನ್ನ ನೇಮಕ ಮಾಡಲಾಗಿದೆ. ಇದು ನಮ್ಮ ಅಜ್ಜ ಸಿ ಎಸ್ ತುಬಚಿ ಅವರು ಕಟ್ಟಿದ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ನಡೆಯುತ್ತಿವೆ. ಶಿಕ್ಷಣ ಸಂಸ್ಥೆಯನ್ನ ಒಂದು ಕುಟುಂಬ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪಿಂಟು ಶೆಟ್ಟಿ ಹಾಗೂ ಅನು ಶೆಟ್ಟಿ ಬಣದ ಸದಸ್ಯರ ಬಹುಮತದಿಂದ ಆಯ್ಕೆಯಾಗಿದ್ದಕ್ಕೆ ಸಂಸ್ಥೆಯ ಕಾರ್ಯದರ್ಶಿ ಪಿಂಟು ಶೆಟ್ಟಿ ಸಂತಸ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!