ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ; ಸಾವಿನ ಸಂಖ್ಯೆ 8 ಕ್ಕೆ ಏರಿಕೆ
ಹುಬ್ಬಳ್ಳಿ – ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಗಾಯಗೊಂಡಿದ್ದ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8 ಕ್ಕೆ ಏರಿದೆ.
ತೀವ್ರ ಸ್ವರೂಪದಲ್ಲಿ ಸುಟ್ಟಿದ್ದ ಎಲ್ಲಾ ಎಂಟು ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಂತಾಗಿದೆ. ಇಸ್ಕಾನ್ ಮಂದಿರದಲ್ಲಿ ಕೆಲಸ ಮಾಡಿಕೊಂಡಿದ್ದ ಸಾಯಿನಗರ ಅಚ್ಚವ್ವನ ಕಾಲೋನಿ ಬಾರಕೇರ ಚಾಳನ ಪ್ರಕಾಶ ನಿಂಗಪ್ಪ ಬಾರಕೇರ (36) ಮಂಗಳವಾರ ಬೆಳಗ್ಗೆ 6:30 ರ ಸುಮಾರಿಗೆ ಮೃತಪಟ್ಟಿದ್ದಾರೆ.
ಅಚ್ಚವ್ವನ ಕಾಲೋನಿಯ ಈಶ್ವರ ಗುಡಿ ಬಳಿಯ ಕಟ್ಟಡದ ಮೇಲಂತ್ತಿಸಿನ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಒಂಭತ್ತು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು.
ಅವರಲ್ಲಿ ಬಾಲಕ ವಿನಾಯಕ ಬಾರಕೇರ ಚೇತರಿಸಿಕೊಳ್ಳುತ್ತಿದ್ದು, ಇನ್ನುಳಿದ ಎಂಟು ಜನರು ಶೇ. 70ರಿಂದ 90ರಷ್ಟು ಪ್ರಮಾಣದಲ್ಲಿ ಸುಟ್ಟು ಗಾಯಗೊಂಡಿದ್ದರು. ಅವರೆಲ್ಲ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ಗೋಕಾಕ ಆಂಟಿ, ಬೆಂಗಳೂರು ತುಂಟ : ರಕ್ತ ಚರಿತ್ರೆ https://belagavivoice.com/gokak-19/


