Select Page

Advertisement

ಡಿ.ಎಲ್.ಇಡಿ. ತರಬೇತಿಗೆ ಅರ್ಜಿ ಆಹ್ವಾನ

ಡಿ.ಎಲ್.ಇಡಿ. ತರಬೇತಿಗೆ ಅರ್ಜಿ ಆಹ್ವಾನ

ಧಾರವಾಡ : ನಗರದ ಹು.ಧಾ. ಮಹಾನಗರ ಪಾಲಿಕೆ ಬಳಿ ಕಡಪಾ ಮೈದಾನದ (ಡಾ.ಮಲ್ಲಿಕಾರ್ಜುನ ಮನಸೂರ ಕಲಾ ಭವನದ) ಎದುರಿಗೆ ಇರುವ ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆ (ಟಿಸಿಡಬ್ಲೂ) ಶಾಲಾ ಶಿಕ್ಷಣ ಇಲಾಖೆಯ ಅಧಿಸೂಚನೆ ಯಂತೆ ಪ್ರಸ್ತುತ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಕನ್ನಡ, ಉರ್ದು ಹಾಗೂ ಇಂಗ್ಲೀಷ ಮಾಧ್ಯಮದ ಡಿಪ್ಲೋಮಾ ಇನ್ ಎಲೆಮೆಂಟರಿ ಎಜ್ಯುಕೇಷನ್ (ಡಿ.ಇಎಲ್.ಇಡಿ) ತರಬೇತಿಗೆ ಅರ್ಜಿ ಆಹ್ವಾನಿಸಿದೆ.

ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಇಲ್ಲಿ ಡಿ.ಇಎಲ್.ಇಡಿ ತರಬೇತಿ ಪಡೆಯಲು ಅವಕಾಶವಿದ್ದು, ಕಲಾ, ವಿಜ್ಞಾನ ಇಲ್ಲವೇ ವಾಣಿಜ್ಯ ವಿಷಯದಲ್ಲಿ ಪಿ.ಯು.ಸಿ. ಪಾಸಾದವರು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ವರ್ಗದವರು ಶೇಕಡಾ 50 ಮತ್ತು ಎಸ್.ಸಿ, ಎಸ್.ಟಿ. ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಶೇಕಡಾ 45 ಅಂಕ ಪಡೆದಿರಬೇಕು. ಪದವೀಧರ ವಿದ್ಯಾರ್ಥಿನಿಯರೂ ಸಹ ಡಿ.ಇಎಲ್.ಇಡಿ ತರಬೇತಿಗೆ ಪ್ರವೇಶ ಪಡೆಯಬಹುದಾಗಿದೆ.

ಡಿ.ಇಎಲ್.ಇಡಿ ತರಬೇತಿ ಪಡೆಯುವುದರಿಂದ ಸರಕಾರಿ ಇಲ್ಲವೇ ಖಾಸಗಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆ ಪಡೆಯ ಬಹುದಾಗಿದೆ. ಈ ನಿಟ್ಟಿನಲ್ಲಿ ಟಿ.ಇ.ಟಿ ಮತ್ತು ಸಿ.ಇ.ಟಿ. ಪರೀಕ್ಷೆ ಕೋಚಿಂಗ್, ಕಂಪ್ಯೂಟರ ತರಬೇತಿ ಉಚಿತವಾಗಿ ನೀಡ ಲಾಗುವುದು. ನುರಿತ ಸಿಬ್ಬಂದಿ ವರ್ಗದ ಜೊತೆಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ.

ಜೂನ್ 5 ಅರ್ಜಿ ಸಲ್ಲಿಸಲು ಕೊನೆಯ ದಿನ. 9480131262 ಅಥವಾ 9945814300 ಮೊಬೈಲ್ಗೆ ಸಂಪರ್ಕಿಸಿ ಪ್ರವೇಶ ಪಡೆಯುವಂತೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಡಾ. ರವಿಕುಮಾರ ಬಾರಾಟಕ್ಕೆ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!