
ಗೃಹಲಕ್ಷ್ಮೀ ಹಣದಿಂದ ಶಾಲೆಗೆ ನೀರಿನ ವ್ಯವಸ್ಥೆ ಮಾಡಿದ ಮಹಿಳೆ

ಶ್ರೀರಂಗಪಟ್ಟಣ : ಗೃಹಲಕ್ಷ್ಮೀ ಯೋಜನೆ ಹಣ ರಾಜ್ಯದ ಮಹಿಳೆಯರ ಪಾಲಿಗೆ ಸಾಕಷ್ಟು ಆಧಾರವಾಗಿದೆ. ಈ ಮಧ್ಯೆ ಗೃಹಲಕ್ಷ್ಮೀ Gruhalaxmi ಯೋಜನೆ ಹಣ ಸೇರಿಸಿ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಹೌದು ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಮನಕೊಪ್ಪಲು ಗ್ರಾಮದ ಮಹಿಳೆಯೊಬ್ಬರು ತಮಗೆ ಬರುತ್ತಿದ್ದ ಗೃಹಲಕ್ಷ್ಮೀ ಹಣವನ್ನು ಸಮಾಜಸೇವೆಗೆ ಬಳಕೆ ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮಿ ರಂಗನಾಥ ಎಂಬುವವರು ಈ ಮಹಿಳೆ.
ಗೃಹಲಕ್ಷ್ಮೀ ಹಣ ಸೇರಿಸಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ನೀರಿನ ಟ್ಯಾಂಕ್ ಜೊತೆಗೆ ವಾಟರ್ ಫಿಲ್ಟರ್ ಕೊಡಿಸಿದ್ದು ಸಧ್ಯ ಮಕ್ಕಳಗೆ ಸಾಕಷ್ಟು ಅನುಕೂಲ ಆಗಿದೆ.
ಇದಕ್ಕೆ 50 ಸಾವಿರ ರುಂ ಕರ್ಚು ಬಂದಿದ್ದು ಗೃಹಲಕ್ಷ್ಮೀ ಯೋಜನೆಯಿಂದ ಬಂದ 30 ಸಾವಿರ ಹಣ ಹಾಗೂ ತನ್ನ ಸ್ವಂತ 20 ಸಾವಿರ ರು. ಸೇರಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.