Select Page

Advertisement

ಹೆರಾಯಿನ್ ಮಾರುತ್ತಿದ್ದ ವ್ಯಕ್ತಿ ಬಂಧಿಸಿದ ಗೋಕಾಕ್ ಪಿಎಸ್ಐ

ಹೆರಾಯಿನ್ ಮಾರುತ್ತಿದ್ದ ವ್ಯಕ್ತಿ ಬಂಧಿಸಿದ ಗೋಕಾಕ್ ಪಿಎಸ್ಐ


ಗೋಕಾಕ್ : ನಗರದಲ್ಲಿ ಹೆರಾಯಿನ್ ಮಾದಕ ಪದಾರ್ಥ ಸೇವಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗೋಕಾಕ್ ನಗರ ಠಾಣೆ ಪಿಎಸ್ಐ ಕಿರಣ ಮೋಹಿತೆ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೆರೆಗೆ ನಡೆಸಿದ್ದ ದಾಳಿಯಲ್ಲಿ ಅರಭಾಜ ಶಭಾಷಖಾನ್ (25) ಆರೋಪಿಯನ್ನು ಶನಿವಾರ ಗೋಕಾಕ್ ನಗರದ ಕೊಪ್ಪ‌ ಆಸ್ಪತ್ರೆ ಮುಂಭಾಗ ಬಂಧಿಸಲಾಗಿದೆ. ಈತನಿಂದ 50 ಸಾವಿರ ಮೌಲ್ಯದ 09 ಗ್ರಾಂ, 250 ಮಿಲಿ ಹೆರಾಯಿನ್ ಹಾಗೂ ಸಿಲ್ವರ್ ಪೇಪರ್ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿ ವಿರುದ್ಧ ಗೋಕಾಕ್ ಶಹರ ಠಾಣೆಯಲ್ಲಿ ಪ್ರಕರಣ ದಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ.


Advertisement

Leave a reply

Your email address will not be published. Required fields are marked *

error: Content is protected !!