Select Page

Advertisement

ಗೋಕಾಕ್ – ಹಬ್ಬದ ದಿನವೇ ರಕ್ತದ ಓಕುಳಿ ; ಯುವಕನ ಬರ್ಬರ ಹತ್ಯೆ

ಗೋಕಾಕ್ – ಹಬ್ಬದ ದಿನವೇ ರಕ್ತದ ಓಕುಳಿ ; ಯುವಕನ ಬರ್ಬರ ಹತ್ಯೆ

ಗೋಕಾಕ್ : ಹಬ್ಬದ ಸಡಗರಲ್ಲಿ ಇರಬೇಕಾದ ಕುಟುಂಬ ಈಗ ಶೋಕ ಸಾಗರದಲ್ಲಿ ಮುಳುಗಿದೆ. ಉಂಡು‌ ಮಲಗುವ ಹೊತ್ತಿನಲ್ಲಿ ರಕ್ತದ ಓಕುಳಿ ಹರಿದಿದ್ದು ಹಳೇ ವೈಷಮ್ಯಕ್ಕೆ ಯುವಕನ ಹತ್ಯೆ ಮಾಡಲಾಗಿದೆ.

ಶನಿವಾರ ರಾತ್ರಿ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಆದಿಜಾಂಬವ ನಗರದಲ್ಲಿ, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ‌. ಶಾನೂರ್ ಪೂಜಾರಿ (೨೭) ಕೊಲೆಯಾದ ದುರ್ದೈವಿ.

ವೈಯಕ್ತಿಕ ದ್ವೇಷ ಕೊಲೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇನ್ನೂ ಆರೋಪಿತರ ಮನೆಯ ಮೇಲೆ ಕಲ್ಲು ತೂರಾಟವೂ ನೆಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!