ಮೈದುಂಬಿ ಹರಿಯುತ್ತಿದೆ ಗೋಕಾಕ್ ಜಲಪಾತ
ಬೆಳಗಾವಿ : ಬಿಸಿಲಿನ ಝಳಕ್ಕೆ ಜನ ಕಂಗಾಲಾಗಿದ್ದು ಮಧ್ಯಾಹ್ನದ ವೇಳೆಗೆ ಹೊರಗೆ ಕಾಲಿಡದ ಪರಿಸ್ಥಿತಿ ಜಿಲ್ಲೆಯಾದ್ಯಂತ ನಿರ್ಮಾಣವಾಗಿದೆ. ಈ ಮಧ್ಯೆ ಜಲಮೂಲಗಳು ಬತ್ತಿ ಹೋಗುತ್ತಿವೆ.
ಇಂತಹ ಬಿಸಿಲಿನ ಪರಿಸ್ಥಿತಿ ಮಧ್ಯೆ ಗೋಕಾಕ್ ಜಲಪಾತ ಮೈದುಂಬಿ ಹರಿಯುತ್ತಿದೆ. ಜನರ ಜೀವನಾಡಿ ಆಗಿರುವ ಘಟಪ್ರಭಾ ನದಿಯಲ್ಲಿ ನೀರನ್ನು ನೋಡಿ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹಿಡಕಲ್ ಜಲಾಶಯದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಘಟಪ್ರಭಾ ನದಿಗೆ ನೀರು ಹರಿಬಿಟ್ಟಿರುವ ಹಿನ್ನಲೆ ಶುಕ್ರವಾರದಂದು ಗೋಕಾಕ ಫಾಲ್ಸ್ ಮೈದುಂಬಿ ಹರಿಯುತ್ತಿರುವ ದೃಶ್ಯ.

