ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ
ಗೋಕಾಕ : ನೀರು ಕುಡಿಯಲು ಹೋಗಿದ್ದ ಯುವಕ ಕಾಲುಜಾರಿ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಗೋಕಾಕ್ ನಗರದಲ್ಲಿ ನಡೆದಿದೆ.
ರವಿವಾರ ಮದ್ಯಾಹ್ನ ಗೋಕಾಕ್ ನಗರದ ಮಾರ್ಕಂಡೆಯ ನದಿಯ ತಿರದ ಹೆಜ್ಜೆಗಾರ ಹೊಲದ ಹತ್ತಿರ ನೀರು ಕುಡಿಯಲು ಹೋಗಿದ್ದ ಸಾಗರ ಗೌಳಿ (16) ಯುವಕ ಕಾಲು ಜಾರಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೊಗಿದ್ದ. ಯುವಕನಿಗಾಗಿ ಹುಡುಕಾಟ ಮುಂದುವರಿದಿತ್ತು.
ಅಗ್ನಿ ಶಾಮಕ ದಳ ಹಾಗೂ ಎಸ್, ಡಿ,ಆರ್,ಎಫ್ ಸಿಬ್ಬಂದಿ
ತೀವ್ರ ತಪಾಸಣೆ ನಂತರ ಯುವಕನ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಅಗ್ನಿ ಶಾಮಕ ತಾಲೂಕಾ ಅಧಿಕಾರಿ ಸದಾನಂದ ಮೇಳವಂಕಿ ಹಾಗು ಇನ್ನಿತರರು ಉಪಸ್ಥಿತರಿದ್ದರು.


