ವಿಚ್ಚೇದನ ಪ್ರಕರಣ : ದಂಪತಿಗಳನ್ನು ಕೊಪ್ಪಳ ಗವಿಸಿದ್ಧೇಶ್ವರ ಶ್ರೀ ಬಳಿ ಕಳುಹಿಸಿದ ಹೈಕೋರ್ಟ್ ನ್ಯಾಯಮೂರ್ತಿ – Video
ಬೆಂಗಳೂರು : ಸಾಮಾನ್ಯವಾಗಿ ವಿಚ್ಛೇದನ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸತಿ, ಪತಿಗಳ ನಿರ್ಧಾರಕ್ಕೆ ಪರಾಮರ್ಶೆ ಮಾಡುವ ಅವಕಾಶ ನೀಡಿ ಕೊನೆಗೆ ಏನು ಆಗದಿದ್ದರೆ ವಿಚ್ಛೇದನ ನೀಡುತ್ತಾರೆ. ಆದರೆ ಇಲ್ಲೊಂದು ಅಪರೂಪದ ಪ್ರಕರಣ ನಡೆದಿದ್ದು ಸ್ವತಃ ನ್ಯಾಯಮೂರ್ತಿ ದಂಪತಿಗಳನ್ನು ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ಬಳಿ ಕಳುಹಿಸಿಕೊಟ್ಟಿದ್ದಾರೆ.
ಗದಗ ಜಿಲ್ಲೆ ಮೂಲದ ಗಂಡ ಮತ್ತು ಹೆಂಡತಿ ಧಾರಾವಾಡ ಹೈಕೋರ್ಟ್ ಪೀಠದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಬ್ಬರ ವಾದ ಪ್ರತಿವಾದ ಆಲಿಸಿದ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಇಬ್ಬರು ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳ ಭೇಟಿ ಮಾಡಿ ಮನಸ್ತಾಪ ಬಗೆಹರಿಸಿಕೊಂಡು ಜೀವನ ನಡೆಸುವಂತೆ ತಿಳಿಸಿದೆ. ಇದರಿಂದ ಮಠಗಳ ಪಾತ್ರ ಸಮಾಜದಲ್ಲಿ ಎಷ್ಟಿದೆ ಎಂಬುದು ತಿಳಿಯುತ್ತದೆ.
ದಾಂಪತ್ಯದ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ವಿವಾಹ ವಿಚ್ಛೇದನ ಕೋರಿ ಬಂದಿದ್ದ ಪತಿ ಪತ್ನಿ ಇಬ್ಬರಿಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಬುದ್ದಿವಾದ ಹೇಳಿದರು. ಗಂಡ-ಹೆಂಡತಿ ಎಂದರೆ ಸಮಸ್ಯೆ ಇದ್ದೇ ಇರುತ್ತದೆ. ಯಾರ ಜೀವನದಲ್ಲಿ ಸಮಸ್ಯೆ ಇಲ್ಲ ಹೇಳಿ. ಹಾಗೆಯೇ ಸಮಸ್ಯೆಗಳನ್ನೇ ಮುಂದೆ ಮಾಡಿಕೊಂಡು ಬೇರೆಯಾಗುವುದು ಸರಿಯಲ್ಲ ಎಂದರು.
ರಸ್ತೆ ಎಂದರೆ ಮೇಲೆ ನೇರವಾಗಿಯೇ ಇರುವುದಿಲ್ಲ. ಅದರಲ್ಲಿ ತಿರುವುಗಳು ಇರುತ್ತವೆ, ಉಬ್ಬುಗಳು ಇರುತ್ತವೆ. ನೋಡಿಕೊಂಡು ಸಾಗಬೇಕು. ಹಾಗೆಯೇ ಸಂಸಾರ ಎಂದರೂ ಸಹ ಭಿನ್ನಾಭಿಪ್ರಾಯ, ಮನಸ್ತಾಪ ಇದ್ದಿದ್ದೇ. ಅದನ್ನು ಮೀರಿಯೂ ಹೊಂದಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಯಾವ ಮಠಾಧೀಶರ ಬಳಿ ಹೋಗುತ್ತೀರಿ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದಾಗ ಹೆಂಡತಿ ಕೊಪ್ಪಳ ಗವಿಸಿದ್ಧೇಶ್ವರ ಮಠಕ್ಕೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾದೀಶದರು. ಓ ಅವರು ಸ್ವಾಮೀ ವಿವೇಕಾನಂದರಿದ್ದಂತೆ ನಾವು ಅವರ ಭಾಷಣ ಕೇಳಿದ್ದೇವೆ. ತಾವು ದಾರಾಳವಾಗಿ ಹೋಗಿ ಎಂದು ಕೊಪ್ಪಳ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೂ ಪೋಸ್ಟ್ ಹಾಗೂ ಇ- ಮೇಲ್ ಮೂಲಕ ಸಂದೇಶ ಕಳುಹಿಸಲು ಆದೇಶಿಸಿದರು.


