
ಪೆಟ್ರೋಲ್ ಪಂಪ್ ಗಳಲ್ಲಿ ಸಾರ್ವಜನಿಕ ಶೌಚಾಲಯ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ NOC ಬಂದ್ – ಗಡ್ಕರಿ ಎಚ್ಚರಿಕೆ

ನವದೆಹಲಿ : ಉತ್ತಮ ಹೆದ್ದಾರಿ ರೂಪಿಸುವಲ್ಲಿ ಎಲ್ಲಾ ಪಕ್ಗಳಿಂದಲೂ ಪ್ರಶಂಸೆ ಪಡೆದಿರುವ ಕೇಂದ್ರ ಹೆದ್ದಾರಿ ಸಚಿವ ನತಿನ್ ಗಡ್ಕರಿ ಮತ್ತೊಂದು ಕ್ರಮಕ್ಕೆ ಮುಂದಾಗಿದ್ದಾರೆ. ಜನರ ಪ್ರಯಾಣದ ವೇಳೆ ಹೆದ್ದಾರಿಯಲ್ಲಿ ಆಗುವ ಸಮಸ್ಯೆ ಕುರಿತು ಸಚಿವ ನಡೆ ಗಮನಸೆಳೆದಿದೆ.
ಪೆಟ್ರೋಲ್ ಪಂಪ್ ಗಳಲ್ಲಿ ಇನ್ಮುಂದೆ ಸಾರ್ವಜನಿಕ ಶೌಚಾಲಯ ಇಲ್ಲ ಎಂದು ಹೇಳುವಹಾಗೆ ಇಲ್ಲ. ಇನ್ಮುಂದೆ ಯಾವ ಪಂಪ್ ನಲ್ಲಿ ಸಾರ್ವಜನಿಕ ಶೌಚಾಲಯ ಇರುವುದಿಲ್ಲ ಅಂತಹ ಪಂಪ್ ಗಳ ಎನ್ಓಸಿ ರದ್ದುಗೊಳಿಸುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಂದುವೇಳೆ ಈ ನಿಯಮ ಉಲ್ಲಂಘನೆ ಮಾಡಿದರೆ ರಾಷ್ಟ್ರೀಯ ಹೆದ್ದಾರಿಯಿಂದ ಪೆಟ್ರೋಲ್ ಪಂಪ್ ಗಳಿಗೆ ಸಂಪರ್ಕ ಕಲ್ಪಿಸುವ ಎನ್ಒಸಿ ರದ್ದುಗೊಳಿಸುವುದಾಗಿ ಸಚಿವರು ಹೇಳಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗ ಆಗಲಿದೆ.
ಬಸ್ ಮತ್ತು ಟ್ರಕ್ ಸೇರಿದಂತೆ ಪ್ರಯಾಣಿಸುವವರು ನೂರಾರು ಕಿ.ಮೀಟರ್ ದೂರ ಸಂಚರಿಸುವ ಹಿನ್ನಲೆಯಲ್ಲಿ ಶೌಚಾಲಯದ ಸಮಸ್ಯೆ ತುಂಬಾ ಆಗುತ್ತದೆ. ಇದರಿಂದ ಸಚಿವರು ಪೆಟ್ರೋಲ್ ಪಂಪ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.