ಶಕ್ತಿ ಯೋಜನೆಗೆ ಬಿತ್ತು ಲಗಾಮು ; ಸಿಕ್ಕ ಬಸ್ಸುಗಳನ್ನು ಮಹಿಳೆಯರು ಹತ್ತುವಂತಿಲ್ಲ….!
ಬೆಂಗಳೂರು : ಶಕ್ತಿ ಯೋಜನೆಯ ಫಲವಾಗಿ ರಾಜ್ಯಾದ್ಯಂತ ಮಹಿಳೆಯರು ಸಂತಸದಿಂದಲೇ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಇನ್ನೂ ಅನೇಕ ಕಡೆಗಳಲ್ಲಿ ಮಹಿಳೆಯರ ದಟ್ಟಣೆ ಹೆಚ್ಚಾಗುತ್ತಿದ್ದು ಅನೇಕ ಜಗಳಗಳು ಸಾಮಾನ್ಯವಾಗಿವೆ.
ಸಧ್ಯ ಶಕ್ತಿ ಯೋಜನೆಗೆ ಸ್ವಲ್ಪ ನಿಮಯ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಅಂತರ್ ರಾಜ್ಯ ಬಸ್ ಗಳಿಗೆ ಅವಕಾಶ ನಿರಾಕರಣೆ ಮಾಡಲಾಗಿದ್ದು, ಉಚಿತ ಪ್ರಯಾಣ ನಿಷೇಧ ಮಾಡಲಾಗಿದೆ. ಇನ್ನೂ ರಾಜ್ಯದ ಒಳಗೆ ಸಂಚರಿಸುವ ಸರ್ಕಾರಿ ಬಸ್ ಗಳಿಗೂ ಕೆಲ ನಿಯಮ ಜಾರಿಗೆ ಬರುವ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದ ಅನೇಕ ಸಮಸ್ಯೆಗಳು ಕಾಣುತ್ತಿವೆ. ಪ್ರಮುಖವಾಗಿ ಮಹಿಳೆಯರು ಪ್ರವಾಹದ ರೂಪದಲ್ಲಿ ಮನೆಯಿಂದ ಹೊರಬಂದು ಬಸ್ ಸಂಚಾರ ಮಾಡುತ್ತಿದ್ದು, ಇದರಿಂದ ಪ್ರಯಾಣದಲ್ಲಿ ತೀರಾ ವ್ಯತ್ಯಯ ಕಾಣಿಸುತ್ತಿದೆ. ಗಂಡಸರು ಹಾಗೂ ಶಾಲಾ ಮಕ್ಕಳು ಬಸ್ ಸಂಚಾರ ಮಾಡಲು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಮಹಿಳೆಯರ ಪ್ರಯಾಣ ಸಂಖ್ಯೆ ಅಧಿಕವಾದ ಕಾರಣ ಸಧ್ಯ ದೇವಸ್ಥಾನಗಳು ತುಂಬಿ ತುಳುಕುತ್ತಿವೆ. ಇದರಿಂದ ಪರಿಸ್ಥಿತಿ ತೀರಾ ಹದಗೆಡುತ್ತಿದ್ದು ಇದು ದೇವಸ್ಥಾನ ಆಡಳಿತ ಮಂಡಳಿಗೂ ತಲೆನೋವು ತರಿಸಿದೆ. ಇದರಿಂದ ಸರ್ಕಾರ ಶಕ್ತಿ ಯೋಜನೆಯಲ್ಲಿ ಕೆಲ ನಿಯಮ ಹಾಕುವ ಸಾಧ್ಯತೆ ದಟ್ಟವಾಗಿದೆ.
ಉಚಿಯ ಬಸ್ ಪ್ರಯಾಣದಲ್ಲಿ ಮಹಿಳೆಯರು ಪ್ರವಾಹದ ರೂಪದಲ್ಲಿ ಬರುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರ ಕೆಲ ಹೊಸ ನಿಯಮ ಸೇರಿಸಲು ಮಂದಾಗಿದೆ. ಇದರ ಪ್ರಕಾರ ಬುಕಿಂಗ್ ವ್ಯವಸ್ಥೆ ಪ್ರಾರಂಭಿಸುವ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ನಿಮಯ ಜಾರಿಗೆ ಮಾಡಿ ನಿಯಂತ್ರಣ ಹಾಕುವ ಉದ್ದೇಶ ಕೂಡಾ ಇದೆ.
ಇನ್ನೂ ಕೆಲ ಬಸ್ ಗಳಿಗೆ ಮಾತ್ರ ಉಚಿತ ಪ್ರಯಾಣದ ಭಾಗ್ಯ ನೀಡುವ ಲಕ್ಷಣ ಗೋಚರಿಸುತ್ತಿದೆ. ಪ್ರತಿದಿನ ಲಕ್ಷಾಂತರ ಹಣದ ನಷ್ಟ ಅನುಭವಿಸುತ್ತಿರುವ ಸಾರಿಗೆ ಇಲಾಖೆಗೆ ಸಧ್ಯ ಗ್ಯಾರಂಟಿ ಗೊಂದಲದಿಂದ ಮತ್ತಷ್ಟು ಸಂಕಷ್ಟ ನೀಡುತ್ತಿರುವುದು ಸ್ಪಷ್ಟ.


