Select Page

Advertisement

ನನ್ನ ತಂದೆ ಜೊತೆ ಮಾತಾಡಿ ಮೂರು ವರ್ಷ ಆಯ್ತು ; ಪ್ಲೀಸ್ ಅವಕಾಶ ಮಾಡಿಕೊಡಿ ಎಂದು ಕೈಮುಗಿದ ಡ್ರೋಣ್ ಪ್ರತಾಪ್

ನನ್ನ ತಂದೆ ಜೊತೆ ಮಾತಾಡಿ ಮೂರು ವರ್ಷ ಆಯ್ತು ; ಪ್ಲೀಸ್ ಅವಕಾಶ ಮಾಡಿಕೊಡಿ ಎಂದು ಕೈಮುಗಿದ ಡ್ರೋಣ್ ಪ್ರತಾಪ್

ಬೆಂಗಳೂರು : ಡ್ರೋಣ್ ವಿಚಾರವಾಗಿ ಜನರಿಂದ ಅವಮಾನಕ್ಕೆ ಒಳಗಾಗಿದ್ದ ಡ್ರೋಣ್ ಪ್ರತಾಪ್ ಸಧ್ಯ ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಿದ್ದಾರೆ. ಈಗಾಗಲೇ ಒಂದು ವಾರ ದಾಟಿ ಎರಡನೇ  ವಾರಕ್ಕೆ ಬಿಗ್ ಬಾಸ್ ನಡೆದಿದ್ದು ಪ್ರತಾಪ್ ಉತ್ತಮ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.

ನಿನ್ನೆ ಸ್ಪರ್ಧಾಳುಗಳಿಗೆ ಬಿಗ್ ಬಾಸ್ ಮನೆಯವರ ಕುರಿತು ಮಾತನಾಡಲು ಅವಕಾಶ ಕಲ್ಪಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಮನೆಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿರಾ ಎಂದು ಕೇಳಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಆಟಗಾರರು ತಮ್ಮ ಮನೆಯವರ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಡ್ರೊಣ್ ಪ್ರತಾಪ್ ಮಾತನಾಡಿ. ನಾನು ನನ್ನ ತಂದೆಯನ್ನು ಹೆಚ್ಚು ಪ್ರೀತಿಸುತ್ತೇನೆ. ತಾಯಿಗಿಂತ ತಂದೆಯನ್ನು ಹೆಚ್ಚು ಪ್ರೀತಿ ಮಾಡುವುದು. ಅವರು ತುಂಬಾ ಮುಗ್ದರು ಅವರಿಗೆ ಏನು ಗೊತ್ತಿಲ್ಲ.‌ ಎಂದು ತಂದೆಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರತಾಪ್ ಭಾವನಾತ್ಮಕವಾಗಿ ಆಡಿದ ಆ ಮಾತು ಎಲ್ಲರನ್ನು ಕದಡಿದೆ. ಕಳೆದ ಮೂರು ವರ್ಷವಾಯ್ತು ನನ್ನ ತಂದೆಯ ಜೊತೆ ಮಾತನಾಡಿ. ಅವರಿಗೆ ಒಂದು ಹಾಯ್ ಹೇಳಬೇಕು ಎಂದು ಅನಿಸುತ್ತಿದೆ ಪ್ಲೀಸ್ ಅವಕಾಶ ಮಾಡಿಕೊಡಿ ಎಂದರು.

ಜನರಿಂದ ಕೆಟ್ಟವ ಎನಿಸಿಕೊಂಡ ಡ್ರೋಣ್ ಪ್ರತಾಪ್ ಮನೆಯವರ ಜೊತೆ ಅಷ್ಟಕ್ಕೇ ಅಷ್ಟೇ ಇದ್ದಿದ್ದು. ಜೊತೆಗೆ ಮೂರು ವರ್ಷವಾಯ್ತು ಡ್ರೋಣ್ ಪ್ರತಾಪ್ ಮನೆಯವರ ಹತ್ತಿರ ಮಾತನಾಡಿಲ್ಲ. ಇಷ್ಟೇಲ್ಲ ನೋವಾದರು ಯಾವುದಕ್ಕೂ ತಲೆಕಡಿಸಿಕೊಳ್ಳದೆ ಆತ ಇನ್ನೂ ಮುನ್ನಡೆಯುತ್ತಿರುವುದು ಜನರಿಗೆ ಇಷ್ಟವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!