ಡಾ. ಬ್ರೋ ಚೀನಾ ಅಭಿವೃದ್ಧಿ ಹೊಗಳಿ ಭಾರತವನ್ನು ತೆಗಳಿದ್ದು ಎಷ್ಟು ಸರಿ….?
ಅಭಿವೃದ್ಧಿ ವಿಚಾರವಾಗಿ ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಕೆಲ ದಿನಗಳ ಹಿಂದೆ ಚೀನಾ ದೇಶದ ಕುರಿತು ಆಡಿದ್ದ ಕೆಲ ಮಾತುಗಳು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಹಾಗಾದರೆ ಡಾ. ಬ್ರೋ ಹೇಳಿದ ಮಾತು ಎಷ್ಟು ಸರಿ ಎಂಬುದನ್ನು ನೋಡಿ.
ಅಭಿವೃದ್ಧಿ ವಿಚಾರದಲ್ಲಿ ಚೀನಾ ಸಾಕಷ್ಟು ಮುಂದಿದೆ ಎಂಬುದನ್ನು ಯಾರು ಮರೆ ಮಾಚಲು ಸಾಧ್ಯವಿಲ್ಲ. ಯಾಕೆಂದರೆ ಅಲಿನ ಟೆಕ್ನಾಲಜಿ ಮತ್ತು ದುಡಿಮೆಯ ಮಟ್ಟ ಸಾಕಷ್ಟು ಎತ್ತರದ ಸ್ಥಾನದಲ್ಲಿದೆ. ಜೊತೆಗೆ ಚೀನಾ ಜನ ಹಾರ್ಡ್ ವರ್ಕ್ ಮಾಡುವಂತವರು ಅದಕ್ಕೆ ಆ ದೇಶ ಸಧ್ಯ ಅಭಿವೃದ್ಧಿಯಿಂದ ಸಾಕಷ್ಟು ಮುಂದಿದೆ.
ಡಾ. ಬ್ರೋ ಇಷ್ಟೇ ಹೇಳಿದ್ದರೆ ಯಾರು ತಲೆ ಕೆಡಿಸಿಕೊಳ್ಳುತ್ತಾ ಇರಲಿಲ್ಲ. ಆತ ಒಂದು ಹೆಜ್ಜೆ ಮುಂದೆಹೋಗಿ ಭಾರತೀಯ ಜಾತಿ ಆಧಾರಿತ ಜಗಳ ಹಾಗೂ ಇಲ್ಲಿನ ರಾಜಕೀಯ ವ್ಯವಸ್ಥೆ ಕುರಿತು ಆಡಿದ ಮಾತುಗಳೇ ಸಧ್ಯ ಸಖತ್ ವೈರಲ್ ಆಗುತ್ತಿವೆ. ನಮ್ಮಲ್ಲಿ ಧರ್ಮ, ಧರ್ಮಗಳ ನಡುವೆ ನಡೆಯುತ್ತಿರುವ ಜಗಳಗಳ ಕುರಿತು ಪಂಚ್ ಡೈಲಾಗ್ ಹೊಡೆದಿದ್ದಾರೆ.
ಡಾ. ಬ್ರೋ ನಮ್ಮಲಿನ ಜಾತಿ ವ್ಯವಸ್ಥೆ ಹಾಗೂ ಧರ್ಮಗಳ ನಡುವೆ ನಡೆಯುವ ಜಗಳದ ಕುರಿತು ಹೇಳಿದ್ದು ಇದು ದೇಶದ ಅಭಿವೃದ್ಧಿಗೆ ಹೇಗೆ ಕುಂಠಿತ ಆಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಅದು ನಿಜವೂ ಹೌದು ಅಭಿವೃದ್ಧಿ ಕಾರ್ಯಗಳು ಒಂದೇ ದೃಷ್ಟಿಕೋನದಿಂದ ಸಾಗಿದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಬ್ರೋ ವಿಚಾರವಾಗಿ ಅವರ ಮಾತು ಒಪ್ಪಬೇಕು.
ಸ್ವಾತಂತ್ರ್ಯ ಪಡೆದು ದಶಕಗಳೇ ಕಳೆದರು ಇನ್ನೂ ಭಾರತ ಕೆಲ ವಿಷಯದಲ್ಲಿ ಅಭಿವೃದ್ಧಿ ಕಂಡಿಲ್ಲ. ಗ್ರಾಮೀಣ ಭಾಗದಲ್ಲಿ ಇನ್ನೂ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಎಲ್ಲದರ ಮಧ್ಯೆ ಚೀನಾ ಬೆಳವಣಿಗೆಯನ್ನು ನಾವು ಆಶಾವಾದಿಗಳಾಗಿ ನೋಡಬೇಕು.
ಒಂದಂತು ಸತ್ಯ. ಚೀನಾ ಅನೇಕ ವಿಚಾರದಲ್ಲಿ ಭಾರತಕ್ಕಿಂತ ಮುಂದಿದೆ. ಮುಂಬರುವ ದಿನಗಳಲ್ಲಿ ಭಾರತ ಕೂಡಾ ಅಭಿವಯ ಪಥದಲ್ಲಿ ಸಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಂದುವೇಳೆ ದೂರದೃಷ್ಟಿಯ ನಾಯಕತ್ವದ ಅಡಿಯಲ್ಲಿ ಭಾರತ ಸಾಗಿದರೆ ಎಲ್ಲವೂ ಸಾಧ್ಯ.


