Select Page

Advertisement

ಡಿಕೆಶಿ ವಿರುದ್ಧ ವಾಮಾಚಾರ ; ಕೇರಳದಲ್ಲಿ ಬೃಹತ್ ಯಾಗ ಆಯೋಜನೆ

ಡಿಕೆಶಿ ವಿರುದ್ಧ ವಾಮಾಚಾರ ; ಕೇರಳದಲ್ಲಿ ಬೃಹತ್ ಯಾಗ ಆಯೋಜನೆ

ಬೆಂಗಳೂರು : ಡಿಸಿಎಂ ಡಿ.ಕೆ ಶಿವಕುಮಾರ, ಸಿಎಂ ‌ಸಿದ್ದರಾಮ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಡಿಕೆಶಿ ಬಾಂಬ್ ಸಿಡಿಸಿದ್ದಾರೆ.

ಶತ್ರು ಸಂಹಾರಕ್ಕೆ ನಡೆಯುವ ಈ ಯಾಗ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಯಾಗ ಅಘೋರಿಗಳ ಮೂಲಕ ನಡೆಯುತ್ತಿದೆ. ಕೇರಳದಲ್ಲಿ ನನ್ನ ವಿರುದ್ಧ ಮಹಾ ಪೂಜೆ ಹಮ್ಮಿಕೊಂಡಿದ್ದು ಈ ಕುರಿತು ಸಂಪೂರ್ಣ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಈ ಯಾಗದಲ್ಲಿ ಪಂಚ ಬಲಿ ಕೊಡಲಾಗುತ್ತಿದೆ. 21 ಕುರಿ, 21 ಮೇಕೆ, 03 ಎಮ್ಮೆ ಹಾಗೂ 5 ಹಂದಿಗಳನ್ನು ಇಲ್ಲಿ ಬಲಿ‌ ಕೊಡಲಾಗುತ್ತಿದೆ. ಸಧ್ಯ ಇಲ್ಲಿ ಯಾಗ ನಡೆಯುತ್ತಿದ್ದು ಈ‌ ಕುರಿತು ಮಾಹಿ ಇದೆ ಎಂದು ಡಿ.ಕೆ ಶಿವಕುಮಾರ ಸ್ಪೋಟಕ ಹೇಳಿಕೆ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!