ವಾಹನಗಳ ಮೇಲೆ ಬರಹ ಹಾಕಿಸುವವರಿಗೆ ಎಚ್ಚರಿಕೆ ; ತಗ್ಲಾಕೊಂಡ್ರೆ ಅಷ್ಟೇ ಕಥೆ
ಬೆಂಗಳೂರು : ವಾಹನಗಳ ಮೇಲೆ ಮನಬಂದಂತೆ ತಮ್ಮ ಇಷ್ಟದ ನಟರ ಕುರಿತು ಪ್ರಚೋದನಾಕಾರಿ ಬರಹ ಹಾಕಿಸಿದರೆ ಇನ್ಮುಂದೆ ಆರ್ಟಿಒ ಅಧಿಕಾರಿಗಳು ಖಡಕ್ ಕ್ರಮದ ವಾರ್ನಿಂಗ್ ನೀಡಿದ್ದಾರೆ.
ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ ನಂತರದಲ್ಲಿ ವಾಹನಗಳ ನಂಬರ್ ಪ್ಲೇಟ್ ಮೇಲೆ ಪ್ರಚೋದನಕಾರಿ ಬರಹ ಹಾಕಿವವುದು ಹೆಚ್ಚಾಗಿತ್ತು. ಸಧ್ಯ ಈ ನಡೆಗೆ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಂಬರ್ ಪ್ಲೇಟ್‌ನಲ್ಲಿ ಬರಹ, ವಾಹನಗಳ ಇತರ ಭಾಗಗಳಲ್ಲಿ ಅನಧಿಕೃತ ಬರಹ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಒ ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ ಉಲ್ಲಂಘಿಸಿ ಸ್ಟಿಕ್ಕರ್, ಬರಹ ಅಂಟಿಸಿದಲ್ಲಿ ಮೊದಲ ಬಾರಿಗೆ 500 ರೂಪಾಯಿ, ಎರಡನೇ ಬಾರಿ 1000 ರೂಪಾಯಿ, ಮೂರನೇ ಬಾರಿ ಅದೇ ತಪ್ಪು ಮಾಡಿದರೆ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್‌ಟಿಒ ಇಲಾಖೆಗಳಿಗೆ ನಿರ್ದೇಶನ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್‌ಟಿಒ ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ.
ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್‌ಟಿಒ ಮಾಡುತ್ತಿದೆ. ಜತೆಗೆ 3 ವರ್ಷದಲ್ಲಿ ಹಲವು ಪ್ರಕರಣ ದಾಖಲು ಮಾಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.


