
Video – ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ; ಪೋಲಿಸ್ ಭದ್ರತೆ ಹೇಗಿತ್ತು ನೋಡಿ…!

ಬಳ್ಳಾರಿ : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ ನಟ ದರ್ಶನ್ ಎಡವಟ್ಟು ಮಾಡಿಕೊಂಡು ಸಧ್ಯ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿದ್ದಾನೆ.
ಗುರುವಾರ ಬೆಳಗಿನ ಜಾವ ಬೆಂಗಳೂರಿನ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಸೂಕ್ತ ಭದ್ರತೆಯ ಮೂಲಕ ನಟ ದರ್ಶನ್ ನನ್ನು ಪೊಲೀಸರರು ಕರೆದೊಯ್ದಿದ್ದು ಇನ್ನುಂದೆ ದರ್ಶನ್ ಗೆ ಬಳ್ಳಾರಿ ಜೈಲೇ ಆಸರೆಯಾಗಲಿದೆ.
ತುಮಕೂರಿನ ಕ್ಯಾತಸಂದ್ರ ಟೋಲ್ ಮೂಲಕ ಬಳ್ಳಾರಿ ಯತ್ತ ನಟ ದರ್ಶನ್ ನನ್ನು ಕರೆದುಕೊಂಡು ಹೋಗಲಾಗಿದೆ. ಈ ಮಧ್ಯೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಸೇರಿದ್ದರು.
ಬೆಂಗಳೂರು ಪೊಲೀಸರ ಬೆಂಗಾವಲಿನಲ್ಲಿ ನಟ ದರ್ಶನ್ ಶಿಫ್ಟ್ ಮಾಡಲಾಗಿದೆ.