Select Page

Advertisement

ಕಾಂಗ್ರೆಸ್ ಗೆದ್ದರೆ ಇವಿಎಂ ಸರಿ ಇದೆ ; ಬಿಜೆಪಿ ಗೆದ್ದರೆ ಸಂಶಯ ಪಕ್ಕಾ – ಡಿ.ಕೆ ಶಿವಕುಮಾರ

ಕಾಂಗ್ರೆಸ್ ಗೆದ್ದರೆ ಇವಿಎಂ ಸರಿ ಇದೆ ; ಬಿಜೆಪಿ ಗೆದ್ದರೆ ಸಂಶಯ ಪಕ್ಕಾ – ಡಿ.ಕೆ ಶಿವಕುಮಾರ

ಬೆಂಗಳೂರು : ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದರೆ ಇವಿಎಂ ನಲ್ಲಿ ಯಾವುದೇ ಲೋಪದೋಷ ಇಲ್ಲ ಎಂಬುದು ಸ್ಪಷ್ಡವಾಗುತ್ತದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಶುಭ ಸೂಚನೆ ಸಿಕ್ಕಿದೆ. ಆದರೆ ಕೆಲವು ಕಡೆಗಳಲ್ಲಿ ಇವಿಎಂ ಕುರಿತು ಸಂಶಯ ಇದ್ದೇ ಇದೆ. ಅಲ್ಲಿ ಯಾವುದೇ ಹೆಚ್ಚು ಕಡಿಮೆ ಆಗಿರಸಿದ್ದರೆ ಜನ ನಮಗೆ ಆಶಿರ್ವಾದ ಮಾಡಿರುತ್ತಾರೆ ಎಂದು ಹೇಳಿದ್ದರು.

ಜವಹರಲಾಲ್ ನೆಹರೂ ಅವರು ಮೊದಲು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರಾಗಿ ದುಡಿದಂತವರು. ಹಾಗಾಗಿ, ನಾನು ಎಲ್ಲಾ ನಮ್ಮ ಜಿಲ್ಲಾಧ್ಯಕ್ಷರಿಗೆ, ಬ್ಲಾಕ್ ಲೀಡರುಗಳಿಗೆ ಮನವಿ ಮಾಡುತ್ತಿದ್ದೇನೆ. ಈಗಿನ ಘಟಕಗಳನ್ನು ವಿಸರ್ಜನೆ ಮಾಡಿ ಹೊಸಬರಿಗೆ ನೀವೆಲ್ಲಾ ಅವಕಾಶ ನೀಡಬೇಕು ಎಂದು ಡಿ.ಕೆ.ಶಿವಕುಮಾರ್, ಮುಖಂಡರಲ್ಲಿ ಕೇಳಿಕೊಂಡಿದ್ದಾರೆ.

ಇನ್ನೂ ಡಿಸಿಎಂ ಹೇಳಿಕೆಗೆ ಬಿಜೆಪಿ ನಾಯಕರು ಭರ್ಜರಿ ತಿರುಗೇಟು ನೀಡಿದ್ದು. ಕರ್ನಾಟಕದಲ್ಲಿ 135 ಸ್ಥಾನ ಗೆದ್ದ ನಿಮಗೆ ಆಗ ಇವಿಎಂ ಮೇಲೆ ನಂಬಿಕೆ ಇತ್ತು, ಈಗ ಯಾಕೆ ಸಂಶಯ ಬಂದಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣುವುದು ನಿಶ್ಚಿತ ಎಂದು ತಿರುಗೇಟು ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!